alex Certify ಆಡಿ ಕಾರ್ ಖರೀದಿಸಿದ ಬಾಲಿವುಡ್ ಹಿರಿಯ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಡಿ ಕಾರ್ ಖರೀದಿಸಿದ ಬಾಲಿವುಡ್ ಹಿರಿಯ ನಟ

ರೋಲ್ಸ್ ರಾಯ್ಸ್, ರೇಂಜ್ ರೋವರ್, ಆಡಿಯಂತಹ ಐಷಾರಾಮಿ ಕಾರ್ ಬ್ರ್ಯಾಂಡ್ ಗಳು ದೇಶದ ಬಾಲಿವುಡ್ ಸೆಲೆಬ್ರೆಟಿಗಳಲ್ಲಿ ಜನಪ್ರಿಯವಾಗಿವೆ. ಹಲವು ಪ್ರಸಿದ್ಧ ತಾರೆಗಳ ಬಳಿ ಆಡಿ ಕಾರುಗಳಿವೆ.

ಕೆಲವು ವಾರಗಳ ಹಿಂದೆ, ಕಿಯಾರಾ ಅಡ್ವಾಣಿ ಅವರು ₹1.56 ಕೋಟಿ (ಎಕ್ಸ್ ಶೋರೂಂ) ಬೆಲೆಯ ಹೊಸ A8 L ಸೆಡಾನ್ ಅನ್ನು ಪರ್ಚೇಸ್ ಮಾಡಿದ್ದಾರೆ.

ಆಡಿ ಹೊಂದಿರುವವರ, ಲಿಸ್ಟ್ ಗೆ ಈ ಬಾಲಿವುಡ್ ನ ಹಿರಿಯ ನಟ ಸೌರಭ್ ಶುಕ್ಲಾ ಸಹ ಸೇರಿಕೊಂಡಿದ್ದಾರೆ. ಬರವಣಿಗೆ ಮತ್ತು ನಿರ್ದೇಶನದಲ್ಲು ಗುರುತಿಸಿಕೊಂಡಿರುವ ಸೌರಭ್, ಕೆಲವು ದಿನಗಳ ಹಿಂದೆ ಆಡಿ ಕ್ಯೂ2 ಎಸ್‌ಯುವಿಯನ್ನು ಖರೀದಿಸಿದ್ದಾರೆ‌.

ಜರ್ಮನಿ ಮೂಲದ ಐಷಾರಾಮಿ ಬ್ರ್ಯಾಂಡ್ ಆಡಿ, ಅಕ್ಟೋಬರ್ 2020 ರಲ್ಲಿ Q2 SUVಯನ್ನ ಭಾರತದಲ್ಲಿ ಬಿಡುಗಡೆ ಮಾಡಿತು. ಈ ಆಡಿ SUV ಮಾಡೆಲ್ ಐದು ರೂಪಾಂತರಗಳಲ್ಲಿ ಲಭ್ಯವಿದೆ, ಸ್ಟ್ಯಾಂಡರ್ಡ್, ಪ್ರೀಮಿಯಂ, ಪ್ರೀಮಿಯಂ ಪ್ಲಸ್ 1, ಪ್ರೀಮಿಯಂ ಪ್ಲಸ್ 2 ಮತ್ತು ಟೆಕ್ನಾಲಜಿ. ಸೌರಭ್ ಯಾವುದನ್ನ ಖರೀದಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಭಾರತದಲ್ಲಿ ಆಡಿ Q2 ಬೆಲೆ ₹34.99 ಲಕ್ಷ ಮತ್ತು ₹48.89 ಲಕ್ಷದ ನಡುವೆ ಇದೆ. 2.0 ಟಿಎಫ್ಎಸ್ಐ ಪೆಟ್ರೋಲ್ ಇಂಜಿನ್ ನಿಂದ ಚಾಲಿತವಾಗಿರೊ ಆಡಿQ2ನ, ಗರಿಷ್ಠ ವೇಗ 228km/ph ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...