alex Certify ವಿದ್ಯಾರ್ಥಿಗಳು ತರಗತಿಗೆ ಹಾಜರಾಗದಿದ್ದಕ್ಕೆ 33 ತಿಂಗಳ ಸಂಬಳವನ್ನೇ ಮರಳಿಸಿದ ಪ್ರಾಧ್ಯಾಪಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳು ತರಗತಿಗೆ ಹಾಜರಾಗದಿದ್ದಕ್ಕೆ 33 ತಿಂಗಳ ಸಂಬಳವನ್ನೇ ಮರಳಿಸಿದ ಪ್ರಾಧ್ಯಾಪಕ…!

ಸರ್ಕಾರಿ ನೌಕರಿ ಸೇರುವುದೆಂದರೆ ಜೀವನ ಸೆಟಲ್ ಆದಂತೆ ಎಂದು ಬಹುತೇಕರು ಭಾವಿಸುತ್ತಾರೆ. ಕೆಲಸ ಮಾಡದಿದ್ದರೂ ಸಂಬಳ ಗ್ಯಾರಂಟಿ ಎಂಬ ನಂಬಿಕೆ ಅಲ್ಲಿರುತ್ತದೆ. ಕೆಲವೊಂದು ನೌಕರರು ಸಹ ಪ್ರಾಮಾಣಿಕವಾಗಿ ತಮಗೆ ವಹಿಸಿದ ಕೆಲಸವನ್ನು ಮಾಡದೆ ಇದ್ದರೂ ಸಂಬಳವನ್ನು ಪಡೆಯಲು ಮಾತ್ರ ಸಿದ್ಧರಾಗಿರುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾದ ಪ್ರಕರಣವೊಂದು ಇಲ್ಲಿದೆ.

ಹೌದು, ಬಿಹಾರದ ಕಾಲೇಜು ಅಂದರೆ ಹಿಂದಿ ಶಿಕ್ಷಕರೊಬ್ಬರು 2009 ರಲ್ಲಿ ತಾವು ಕಾಲೇಜಿಗೆ ಸೇರಿದಾಗಿನಿಂದಲೂ 2022ರ ಮೇ ತಿಂಗಳವರೆಗೆ ತಮ್ಮ ವಿಭಾಗಕ್ಕೆ ಯಾವುದೇ ವಿದ್ಯಾರ್ಥಿ ಹಾಜರಾಗದ ಕಾರಣ ಒಟ್ಟು 33 ತಿಂಗಳ ಸಂಬಳವಾದ 23.82 ಲಕ್ಷ ರೂಪಾಯಿಗಳನ್ನು ನೈತಿಕ ನೆಲೆಗಟ್ಟಿನ ಮೇಲೆ ಕಾಲೇಜಿಗೆ ಮರಳಿಸಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಡಾ. ಲಲನ್ ಕುಮಾರ್ ಪ್ರಾಮಾಣಿಕತೆ ತೋರಿದ ಉಪನ್ಯಾಸಕರಾಗಿದ್ದು, ಇವರು ಬಳಿಕ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಎಂಫಿಲ್ ಮತ್ತು ಪಿಎಚ್ಡಿ ಕೂಡಾ ಮಾಡಿದ್ದಾರೆ. ತಮ್ಮ ಸಂಬಳವನ್ನು ಮರಳಿಸಿರುವ ಅವರು ಈಗ ತಮ್ಮನ್ನು ಬೇರೆ ಯಾವುದಾದರೂ ಒಂದು ಕಾಲೇಜಿಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...