alex Certify ತನ್ನ ಆಟೋದಲ್ಲಿ ಏರ್​ಪೋಡ್ಸ್​ ಮರೆತು ಹೋದ ಮಹಿಳೆಯನ್ನು ಹುಡುಕಿ ವಾಪಸ್​ ನೀಡಿದ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಆಟೋದಲ್ಲಿ ಏರ್​ಪೋಡ್ಸ್​ ಮರೆತು ಹೋದ ಮಹಿಳೆಯನ್ನು ಹುಡುಕಿ ವಾಪಸ್​ ನೀಡಿದ ಚಾಲಕ

ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಆಟೋದಲ್ಲಿಯೇ ಮರೆತು ಬಿಟ್ಟ ಏರ್​ಪೋಡ್ಸ್ ಒಂದನ್ನು ಆಟೋ ಚಾಲಕ ತಲುಪಿಸುವ ಮೂಲಕ ಶ್ಲಾಘನಾರ್ಹ ಕಾರ್ಯ ಮಾಡಿದ್ದಾರೆ. ಶಿದಿಕಾ ಎಂಬ ಮಹಿಳೆ ಈ ಬಗ್ಗೆ ಜಾಲತಾಣದಲ್ಲಿ ಈ ವಿಷಯ ತಿಳಿಸಿದ್ದಾರೆ.

ಶಿದಿಕಾ ಎಂದಿನಂತೆ ನೌಕರಿಗೆ ಹೋಗಲು ಆಟೋ ಏರಿದ್ದಾರೆ. ಗಡಿಬಿಡಿಯಲ್ಲಿ ತಮ್ಮ ಏರ್​ಪಾಡ್ಸ್​​ ಅನ್ನು ಆಟೋದಲ್ಲಿಯೇ ಬಿಟ್ಟು ಇಳಿದಿದ್ದಾರೆ. ಇದನ್ನು ಗಮನಿಸಿದ ಚಾಲಕ, ಏರ್​ಪಾಡ್ಸ್​ ಲಭ್ಯವಾಗುತ್ತಿದ್ದಂತೆ ಫೋನ್​ಪೇ ಮೂಲಕ ಶಿದಿಕಾ ಅವರ ನಂಬರ್​ ಪತ್ತೆ ಹಚ್ಚಿ ಅವರ ಕಚೇರಿಯ ವಿಳಾಸವನ್ನು ಪಡೆದುಕೊಂಡಿದ್ದಾರೆ.

ದುಬಾರಿ ಬೆಲೆಯ ಈ ಏರ್​ಪಾಡ್​ ಅನ್ನು ಶಿದಿಕಾ ಅವರಿಗೆ ಅರ್ಧಗಂಟೆಯೊಳಗೆ ತಲುಪಿಸಿದಾಗ ಆಕೆ ಅಚ್ಚರಿಗೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದು, ‘ಆಟೋದಲ್ಲಿ ನಾನು ನನ್ನ ಏರ್​​ಪಾಡ್ಸ್​​ ಕಳೆದುಕೊಂಡೆ. ಆದರೆ ಆಟೋ ಚಾಲಕ ಫೋನ್​ಪೇ ಮೂಲಕ ನನ್ನ ನಂಬರ್​ ಹುಡುಕಿ ಅರ್ಧ ಗಂಟೆಯಲ್ಲಿ ನನ್ನ ಕಚೇರಿಗೆ ಬಂದು ಸೆಕ್ಯೂರಿಟಿಯ ಬಳಿ ಏರ್​ಪಾಡ್​ ತಲುಪಿಸಿ ಹೋಗಿದ್ದಾರೆ.’ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...