alex Certify ವಿಚಿತ್ರ: ಲಸಿಕೆ ಪಡೆಯದಿದ್ದವರಿಗೆ ಮಾತ್ರವೇ ಈ ರೆಸ್ಟೋರೆಂಟ್‌ ಪ್ರವೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ: ಲಸಿಕೆ ಪಡೆಯದಿದ್ದವರಿಗೆ ಮಾತ್ರವೇ ಈ ರೆಸ್ಟೋರೆಂಟ್‌ ಪ್ರವೇಶ

ಮಾಸ್ಕ್ ವಿರೋಧಿ ಅಭಿಯಾನ ಅಮೆರಿಕದಲ್ಲಿ ತುಂಬಾನೇ ಜನಪ್ರಿಯವಾಗಿದೆ. ಕೋವಿಡ್‌ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ನಿಜಕ್ಕೂ ಎಷ್ಟು ಪರಿಣಾಮಕಾರಿ ಎಂದು ಪ್ರಶ್ನಿಸುವ ಮಂದಿ, ಇದರಿಂದ ಅಧಿಕಾರಿಗಳು ದಂಡದ ಹೆಸರಿನಲ್ಲಿ ಸುಲಿಗೆ ಮಾಡುವುದೇ ಆಗಿದೆ ಎಂದು ಆಪಾದಿಸುತ್ತಿದ್ದಾರೆ.

ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್‌ನಲ್ಲಿರುವ ಬೆಸಿಲಿಕೋಸ್ ಪಾಸ್ತಾ ಎ ವಿನೋ ಹೆಸರಿನ ಈ ರೆಸ್ಟೋರಂಟ್‌ನಲ್ಲಿ ಮಾಸ್ಕ್ ಹಾಕದೇ ಇದ್ದರೆ ಮಾತ್ರವೇ ಪ್ರವೇಶ ನೀಡುವುದಲ್ಲದೇ, ಕೋವಿಡ್ ಲಸಿಕೆ ಪಡೆಯದೇ ಇರುವ ಸಾಕ್ಷಿ ತೋರಿದರೆ ಮಾತ್ರವೇ ಎಂಟ್ರಿ ಸಿಗುತ್ತದೆ.

ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ತುಟ್ಟಿ ಭತ್ಯೆ ಶೇ. 11.25 ರಿಂದ ಶೇ.21.50 ಕ್ಕೆ ಹೆಚ್ಚಳ

ಮಾಸ್ಕ್‌ ವಿರೋಧಿ ನೀತಿಯಿಂದಾಗಿ ಸುದ್ದಿಯಲ್ಲಿರುವ ಈ ಇಟಾಲಿಯನ್ ರೆಸ್ಟೋರೆಂಟ್‌ ತನ್ನ ಹೊಸ ನಿಯಮಗಳ ಬಗ್ಗೆ ಕಿಟಕಿ ಮೇಲೆ ಬರೆದಿದೆ.

“ನೋಟಿಸ್: ಲಸಿಕೆ ಪಡೆಯದೇ ಇರುವ ಸಾಕ್ಷಿ ಬೇಕಾಗಿದೆ. ಅಮೆರಿಕ ವಿರೋಧಿ ಮೂರ್ಖತನವನ್ನು ನಾವು ಸುತಾರಾಂ ಸಹಿಸಿಕೊಳ್ಳುವುದಿಲ್ಲ. ವಿಚಾರ ಮಾಡಿದ್ದಕ್ಕೆ ಧನ್ಯವಾದ” ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ.

THINK ABOUT IT …#ProofOfBeingUnVaccinatedRequiredAtBasilico's#ProofOfBeingUnVaccinated#PonderTheMessage#Don'…

Posted by Basilico's Pasta E Vino on Tuesday, July 20, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...