alex Certify ಬೆತ್ತಲೆಯಾಗಿ ಓಡಾಡಲು ಬಾಡಿಗೆ ಉದ್ಯಾನವನ ಬೇಕೆಂದ ಭೂಪ…! ವೃದ್ದನ ಈ ಹುಚ್ಚಾಸೆ ಹಿಂದಿನ ಕಥೆ ಏನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆತ್ತಲೆಯಾಗಿ ಓಡಾಡಲು ಬಾಡಿಗೆ ಉದ್ಯಾನವನ ಬೇಕೆಂದ ಭೂಪ…! ವೃದ್ದನ ಈ ಹುಚ್ಚಾಸೆ ಹಿಂದಿನ ಕಥೆ ಏನು ಗೊತ್ತಾ..?

ಬಾಡಿಗೆಗೆ ಮನೆ ಹುಡುಕುತ್ತಿರುವವರನ್ನ ನೋಡಿರ್ತಿರಾ ! ಅಂಗಡಿ ಹುಡುಕೋದನ್ನೂ ನೋಡಿರ್ತಿರಾ? ಅಷ್ಟೇ, ಏಕೆ ಬಾಡಿಗೆಗೆ ಜಾಗ ಹುಡುಕೋರು ಇರ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬಾಡಿಗೆಗೆ ತೋಟವನ್ನು ಹುಡುಕುತ್ತಿದ್ದಾರೆ. ಅದು ಏಕೆ ಗೊತ್ತಾ ಬೆತ್ತಲೆಯಾಗಿ ಓಡಾಡೋದಕ್ಕೆ, ಈ ಸುದ್ದಿ ಕೇಳಿ ಶಾಕ್ ಆದ್ರಾ ಹೇಗೆ ? ಈ ಸುದ್ದಿ ವಿಚಿತ್ರ ಆದರೂ ಸತ್ಯ

ಬ್ರಿಟನ್ ಪ್ರಜೆಯಾಗಿರುವ 86 ವರ್ಷದ ಪರಿಸರವಾದಿ ಸ್ಟುವರ್ಟ್ ಹವುಡ್, ಬೆತ್ತಲೆಯಾಗಿ ಬಿಂದಾಸ್ ಆಗಿ ಓಡಾಡುವುದಕ್ಕೆ ತಮ್ಮದೇ ಆದ ತೋಟ ಇದ್ದರೆ ಒಳ್ಳೆಯದು ಎಂದು ಬಾಡಿಗೆ ತೋಟವನ್ನ ಹುಡುಕುತ್ತಿದ್ದಾನೆ. ಅಸಲಿಗೆ ಸ್ಟುವರ್ಟ್ ಗೆ 2008 ರಿಂದಲೂ ಬೆತ್ತಲೆಯಾಗಿ ಓಡಾಡುವ ಅಭ್ಯಾಸ ಇದೆ.

14 ವರ್ಷದ ಹಿಂದೆ, ದಕ್ಷಿಣ ಡರ್ಬಿಶೈರ್‌ನ ಸ್ಮಾಡಿನ್ ‌ಕೋಟ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸ್ಟುವರ್ಟ್ ಮತ್ತು ಇವರ ಪತ್ನಿ ಭಾಗವಹಿಸಿದ್ದರು. ಅಲ್ಲಿ ತೋರಿಸಲಾದ ಸಾಕ್ಷ್ಯಚಿತ್ರ ವೀಕ್ಷಿಸಿ, ಹಾಗೂ ಅಲ್ಲಿನ ಸೆಶನ್‌ನಲ್ಲಿ ಭಾಗವಹಿಸಿದ್ದ ನಂತರ ಇವರು ಜೀವನ ನೋಡುವ ದೃಷ್ಟಿಯೇ ಬದಲಾಗಿ ಹೋಗಿತ್ತು. ಪ್ರತಿವರ್ಷ ಸೈಗ್ರೆಸ್ ಬಳಿಯ ಲೇಕ್ ಸೈಡ್ ಫಾರ್ಮಗೆ, ವರ್ಷಕ್ಕೆ ಏನಿಲ್ಲ ಅಂದರೂ ಎರಡು ಬಾರಿ ಇವರು ಭೇಟಿ ಕೊಟ್ಟು, ಅಲ್ಲಿ ಕೆಲ ದಿನ ಬೆತ್ತಲೆಯಾಗಿ ಓಡಾಡಿ ಬರುತ್ತಿದ್ದರು. ಆದರೆ ಈಗ ವಯಸ್ಸಾದ ಕಾರಣ ಅಷ್ಟು ದೂರ ಪ್ರಯಾಣ ಮಾಡುವುದು ಕಷ್ಟವಾಗಿದೆ.

ಇದೇ ಕಾರಣಕ್ಕೆ ಈಗ ಮನೆಯ ಬಳಿಯೇ ಯಾರ ತೋಟವಾದರೂ ಸಿಕ್ಕರೆ ಅಲ್ಲೇ ಬೆತ್ತಲೆಯಾಗಿ ಓಡಾಡಬಹುದು ಅನ್ನೊದು ಇವರ ಆಸೆ. ಇದೇ ಕಾರಣಕ್ಕೆ ಈಗ ಬಾಡಿಗೆಗೆ ತೋಟವನ್ನು ಹುಡುಕುತ್ತಿದ್ದಾರೆ. ಅಷ್ಟಕ್ಕೂ ಸ್ಟುವರ್ಟ್ ಅವರಿಗೆ ಹೀಗೆ ನಿರ್ವಸ್ತ್ರದಾರಿಯಾಗಿ ಓಡಾಡುವ ಅಭ್ಯಾಸದ ಮುಂಚೆ ಇವರನ್ನ ಬೆತ್ತಲೆಯಾಗಿ ನೋಡಿದ್ದು ಇವರ ಪತ್ನಿ ರೌನಾ ಮಾತ್ರ.

‘ನನಗೆ ಬೆತ್ತಲೆಯಾಗಿ ಓಡಾಡುವುದಕ್ಕೆ ಖುಷಿಯಾಗುತ್ತೆ. ನಾನು ಸ್ವತಂತ್ರವಾಗಿದ್ದೇನೆ ಅನ್ನೋ ಭಾವ. ಬೆತ್ತಲೆಯಾಗುವುದಕ್ಕೆ ವಯಸ್ಸು ಅಡ್ಡಿ ಬರುವುದಿಲ್ಲ. ನಿಮ್ಮ ದೇಹದ ಬಗ್ಗೆ ಹೆಮ್ಮೆ ಇರಬೇಕೇ ವಿನಃ ನಾಚಿಕೆಯಲ್ಲ ಎಂದು ಸ್ಟುವರ್ಟ್ ತಮ್ಮ ಮನದಾಳದ ಮಾತನ್ನ ಮಾಧ್ಯಮದ ಮೂಲಕ ಜನರಿಗೆ ಹೇಳಿದ್ದಾರೆ. ಅಲ್ಲದೇ ಈಗ ಯಾರಾದರೂ ಬಾಡಿಗೆಗೆ ತೋಟ ಕೊಟ್ಟಿದ್ದೇ ಆದಲ್ಲಿ ಅವರಿಗೆ ತಾನು ಬಾಡಿಗೆ ಹಣ ಕೊಡುವುದಲ್ಲದೇ ತೋಟದ ಮಾಲೀಕನಿಗೆ ತೋಟದ ಕುರಿತಾಗಿ ಸಲಹೆ ಕೊಡುವುದಕ್ಕೂ ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...