alex Certify 1.9 ಕಿ.ಮೀ. ಉದ್ದ, 100 ಕೋಚ್…! ಇಲ್ಲಿದೆ ವಿಶ್ವದ ಅತಿ ಉದ್ದದ ಪ್ರಯಾಣಿಕ ರೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1.9 ಕಿ.ಮೀ. ಉದ್ದ, 100 ಕೋಚ್…! ಇಲ್ಲಿದೆ ವಿಶ್ವದ ಅತಿ ಉದ್ದದ ಪ್ರಯಾಣಿಕ ರೈಲು

ಸ್ವಿಜರ್ಲೆಂಡ್​: ಸ್ವಿಜರ್ಲೆಂಡ್​ನ ಅತ್ಯಂತ ಅದ್ಭುತವಾದ ಆಲ್ಪ್ಸ್ ಕಣಿವೆ ಮೂಲಕ ಹಾದುಹೋಗುವ ರೈಲ್ವೆಯು ವಿಶ್ವದ ಅತಿ ಉದ್ದದ ಪ್ರಯಾಣಿಕ ರೈಲಿನ ದಾಖಲೆಯನ್ನು ಹೊಂದಿರುವುದಾಗಿ ಸ್ವಿಜರ್​ರ್ಲೆಂಡ್​ ಹೇಳಿಕೊಂಡಿದೆ. ರೈಟಿಯನ್ ರೈಲ್ವೇ ಕಂಪೆನಿಯು ತಾನು ಈ ದಾಖಲೆ ಮಾಡಿರುವುದಾಗಿ ಹೇಳಿಕೊಂಡಿದ್ದು, ಅದೀಗ ವೈರಲ್​ ಆಗಿದೆ.

ಪನಿ ಹೆಸರಿನ ಈ ರೈಲು 1.9 ಕಿಲೋಮೀಟರ್ ಉದ್ದ (1.2-ಮೈಲಿ-ಉದ್ದ) ಹೊಂದಿದ್ದು, 100 ಕೋಚ್‌ಗಳನ್ನು ಒಳಗೊಂಡಿದೆ. ಇದು ಸ್ವಿಸ್​ನ ಅಲ್ಬುಲಾ/ಬರ್ನಿನಾ ಮಾರ್ಗದಲ್ಲಿ ಪ್ರಿಡಾದಿಂದ ಬರ್ಗುನ್‌ಗೆ ಓಡಿದ್ದು, ವಿಶ್ವದ ಅತಿ ಉದ್ದದ ರೈಲು ಎಂಬ ಹೆಮ್ಮೆ ಗಳಿಸಿರುವುದಾಗಿ ವರದಿಯಾಗಿದೆ. ಸ್ವಿಸ್ ರೈಲ್ವೆಯ 175 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ದಾಖಲೆ ಮಾಡಲು ಈ ರೈಲಿನ ಸಂಚಾರ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮಾರ್ಗವನ್ನು 2008 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗೊತ್ತುಪಡಿಸಿತ್ತು. ಈ ಮಾರ್ಗದಲ್ಲಿ 22 ಸುರಂಗಗಳು ಇವೆ. ಮಾತ್ರವಲ್ಲದೇ ಕೆಲವು ಪರ್ವತಗಳು ಹಾಗೂ 48 ಸೇತುವೆಗಳು ಇದ್ದು, ರಮಣೀಯ ತಾಣವಾಗಿದೆ, ಈ ಮಾರ್ಗದಲ್ಲಿ ರೈಲು ಸಾಗಿದೆ.

ಇಡೀ ಪ್ರಯಾಣವು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿತು. ರೈಲಿನ 25 ವಿಭಾಗಗಳು ಸುಮಾರು 25 ಕಿಲೋಮೀಟರ್ (15.5 ಮೈಲುಗಳು) ಸುತ್ತುವುದನ್ನು ವೀಕ್ಷಿಸಲು ರೈಲು ಉತ್ಸಾಹಿಗಳು ಕಣಿವೆಯಲ್ಲಿ ಸಾಲುಗಟ್ಟಿ ನಿಂತಿದ್ದರು.

Around 3000 people attended the festival and lined the rails in Bergün to welcome the world's longest passenger train. Photo / Yanik Buerkli, Keystone; AP
The Swiss Gornergrat Cog Railway in Zermatt with the Matterhorn in the distance. Photo / Victor He, Unsplash

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...