alex Certify ವಾಹನ ಮಾಲೀಕರಿಗೆ ಮತ್ತೊಂದು ಶಾಕ್: ಥರ್ಡ್ ಪಾರ್ಟಿ ಮೋಟರ್‌ ವಿಮೆ ಪ್ರೀಮಿಯಂ ಏರಿಕೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಮಾಲೀಕರಿಗೆ ಮತ್ತೊಂದು ಶಾಕ್: ಥರ್ಡ್ ಪಾರ್ಟಿ ಮೋಟರ್‌ ವಿಮೆ ಪ್ರೀಮಿಯಂ ಏರಿಕೆ ಸಾಧ್ಯತೆ

ಕೋವಿಡ್ ನೆವದಲ್ಲಿ ಎಲ್ಲಾ ಸರಕುಗಳು ಮತ್ತು ಸೇವೆಗಳ ಬೆಲೆಗಳಲ್ಲಿ ಏರಿಕೆಯಾಗುತ್ತಿರುವ ನಡುವೆ ವಿಮಾ ಕಂಪನಿಗಳು ಸಹ ಇದೇ ಭರದಲ್ಲಿ ಒಂದಷ್ಟು ಬೆಲೆ ಏರಿಕೆಯಗಳಿಗೆ ಮುಂದಾಗಿವೆ.

ಮೂರನೇ ಪಾರ್ಟಿ ಮೋಟರ್‌ ವಿಮೆಯ ಪ್ರೀಮಿಯಂಗಳ ಬೆಲೆಯಲ್ಲಿ 15-20 ಪ್ರತಿಶತದಷ್ಟು ಏರಿಕೆ ಮಾಡಲು ಅನುಮತಿ ಕೋರಿ ವಿಮಾ ಕಂಪನಿಗಳು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡೆಐ) ಅನುಮತಿ ಕೋರಿವೆ.

ತೋರಿಸಿಕೊಳ್ಳುವ ರೀತಿಯಲ್ಲೇ ಸಿಟ್ಟಾದ ಮೋದಿ: ನಾನು ಜೀವಂತವಾಗಿ ತಲುಪಿದ್ದಕ್ಕೆ ನಿಮ್ಮ ಸಿಎಂಗೆ ಧನ್ಯವಾದ ಎಂದು ವ್ಯಂಗ್ಯ

ಸಾಂಕ್ರಮಿಕಕ್ಕೂ ಮುನ್ನವೇ ಮೂರನೇ ಪಾರ್ಟಿ ಮೋಟರ್‌ ವಿಮೆಯ ಪ್ರೀಮಿಯಂಗಳಲ್ಲಿ ಏರಿಕೆ ಮಾಡಲು ವಿಮಾ ಸಂಸ್ಥೆಗಳು ನಿರ್ಧರಿಸಿದ್ದವು ಎಂದು ವರದಿಗಳು ತಿಳಿಸಿವೆ. ಆದರೆ ಕೋವಿಡ್-19 ಕಾರಣದಿಂದಾಗಿ ಈ ಪ್ಲಾನ್‌ ಕೈಗೂಡಿರಲಿಲ್ಲ.

ಪ್ರಸಕ್ತ ಪ್ರೀಮಿಯಂ ದರಗಳು ಸಾಕಾಗುತ್ತಿಲ್ಲ ಎಂದು ನಂಬಿರುವ ಸಾಮಾನ್ಯ ವಿಮಾ ಸೇವೆಗಳ 25ರಷ್ಟು ಸೇವಾದಾರರಿಗೆ ಪ್ರೀಮಿಯಂ ದರಗಳ ಏರಿಕೆ ಸಂಬಂಧ ಐಆರ್‌ಡಿಎಐನಿಂದ ಅನುಮತಿ ಸಿಗುವ ನಿರೀಕ್ಷೆ ಇದೆ.

ಒಂದು ವೇಳೆ ಈ ಪ್ರಸ್ತಾವನೆಗೆ ಐಆರ್‌ಡಿಎಐ ಅನುಮೋದನೆ ಕೊಟ್ಟಲ್ಲಿ, ವಾಹನ ಖರೀದಿದಾರಿಗೆ ಮೂರನೇ ಪಾರ್ಟಿ ವಿಮಾ ಪ್ರೀಮಿಯಂ ರೂಪದಲ್ಲಿ ಇನ್ನಷ್ಟು ಹೆಚ್ಚಿನ ಮೊತ್ತ ಪೀಕಬೇಕಾಗಿ ಬರುವ ಕಾರಣ ವಾಹನ ಖರೀದಿ ಇನ್ನಷ್ಟು ದುಬಾರಿಯಾಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...