alex Certify ಚಿನ್ನದ ಮೇಲೆ ಸಾಲ ಪಡೆಯುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದ ಮೇಲೆ ಸಾಲ ಪಡೆಯುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಬ್ಯಾಂಕ್​ ಹಾಗೂ ಎನ್​.ಬಿ.ಎಫ್.​​ಸಿ.ಗಳ ನಡುವೆ ಕೂದಲೆಳೆಯ ಅಂತರವಿದೆ. ಬ್ಯಾಂಕ್​​ಗಳು ಉತ್ತಮ ಬಡ್ಡಿ ದರವನ್ನ ನೀಡುತ್ತವೆ. ಆದರೆ ಎನ್​​ಬಿಎಫ್​​ಸಿಗಳು ಹೆಚ್ಚಿನ ಮೊತ್ತವನ್ನ ಸಾಲದ ರೂಪದಲ್ಲಿ ನೀಡ್ತಾರೆ. ಹೀಗಾಗಿ ನೀವು ಚಿನ್ನದ ಮೇಲೆ ಸಾಲ ಪಡೆಯುವ ಮುನ್ನ ಬ್ಯಾಂಕ್ ಹಾಗೂ ಎನ್​​ಬಿಎಫ್​​ಸಿಗಳ ನಡುವಿನ ವ್ಯತ್ಯಾಸವನ್ನ ಅರಿಯಲೇಬೇಕು.

ಉದಾಹರಣೆಗೆ ಸಾಲಗಾರನ ಬಳಿ 20 ಗ್ರಾಂ ತೂಕದ ಚಿನ್ನದ ಸರ ಇದೆ ಎಂದಿಟ್ಟುಕೊಳ್ಳೋಣ. ಆತ ಆ ಸರವನ್ನ ಗಿರವಿಯಿಟ್ಟು ಹಣ ಪಡೆಯಲು ಬಯಸಿದ್ದರೆ ಬ್ಯಾಂಕ್​ ಹಾಗೂ ಎನ್​​ಬಿಎಫ್​ಸಿ​ಗಳೆರಡೂ ಆತನಿಗೆ ಚಿನ್ನದ ಮೌಲ್ಯದ 75 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚು ಹಣವನ್ನ ನೀಡುತ್ತವೆ. ಅಂದರೆ 10 ಗ್ರಾಂ ಚಿನ್ನಕ್ಕೆ ಬ್ಯಾಂಕ್​​ನಲ್ಲಿ 46,500 ರೂಪಾಯಿ ಸಿಕ್ಕಿದ್ರೆ , ಎನ್​ಬಿಎಫ್​​ಸಿ​ನಲ್ಲಿ ಇದಕ್ಕೂ ಹೆಚ್ಚಿನ ಹಣ ಸಿಗಲಿದೆ.

ಚಿನ್ನವನ್ನ ಗಿರವಿ ಇಡಬೇಕು ಅಂದರೆ ಅದು ಕನಿಷ್ಟ 18 ಕ್ಯಾರೆಟ್​​ ಶುದ್ಧತೆಯನ್ನ ಹೊಂದಿರಲೇಬೇಕು. ಇದಕ್ಕಿಂತ ಕಡಿಮೆ ಶುದ್ಧತೆಯುಳ್ಳ ಚಿನ್ನವನ್ನ ತೆಗೆದುಕೊಳ್ಳಲಾಗೋದಿಲ್ಲ. ಅಲ್ಲದೇ ಚಿನ್ನವನ್ನ ತೂಕ ಹಾಕುವ ವೇಳೆ ಅದರಲ್ಲಿರುವ ಹರಳು, ಮುತ್ತು, ಹವಳಗಳನ್ನ ಪರಿಗಣನೆ ಮಾಡೋದಿಲ್ಲ ಅನ್ನೋದನ್ನೂ ನೆನಪಿನಲ್ಲಿಡಬೇಕು.

ಆಧಾರ್, ರೇಷನ್ ಕಾರ್ಡ್ ಹೊಂದಿದವರಿಗೆ ಪಿಎಂ ಯೋಜನೆ ಸಾಲ: ನಕಲಿ ಲೋನ್ ವೆಬ್ಸೈಟ್ ಗಳ ಬಗ್ಗೆ ಇರಲಿ ಎಚ್ಚರ

ಇನ್ನು ಚಿನ್ನದ ನಾಣ್ಯಗಳ ವಿಚಾರಕ್ಕೆ ಬಂದರೆ ಬ್ಯಾಂಕ್​ ಹಾಗೂ ಎನ್​ಬಿಪಿಎಸ್​ಗಳು ಹೆಚ್ಚಿನ ಶುದ್ಧತೆಯನ್ನ ಕೇಳಬಹುದು. ಹಾಗೂ ಚಿನ್ನದ ನಾಣ್ಯದ ತೂಕದ ಮೇಲೆ ನಿರ್ಬಂಧ ಹೇರಲೂಬಹುದು. ಅನೇಕ ಕಡೆ 50 ಗ್ರಾಂಗಿಂತ ಹೆಚ್ಚಿನ ತೂಕದ ಚಿನ್ನದ ನಾಣ್ಯಗಳನ್ನ ಸ್ವೀಕರಿಸೋದಿಲ್ಲ.

ಇನ್ನು ಹೆಚ್ಚಿನ ಸಾಲದಾತರು ಪೂರ್ವಪಾವತಿ ಶುಲ್ಕವನ್ನ ಸ್ವೀಕರಿಸೋದಿಲ್ಲ. ಒಂದು ವೇಳೆ ಕೆಲವರು ಈ ಶುಲ್ಕವನ್ನ ಸ್ವೀಕರಿಸಿದ್ದರೂ ಸಹ ಕೇವಲ 1 ಪ್ರತಿಶತದಷ್ಟು ಕೇಳಬಹುದು. ಇನ್ನು ಕೆಲವು ಕಡೆ ಮೌಲ್ಯಮಾಪನಾ ಶುಲ್ಕ ಹಾಗೂ ಸಂಸ್ಕರಣಾ ಶುಲ್ಕಗಳನ್ನ ವಿಧಿಸುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...