alex Certify ಕಳವು ಮಾಡುವ ಮುನ್ನ ಮನೆಯನ್ನು ಅಲಂಕರಿಸಿದ ಕಳ್ಳ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳವು ಮಾಡುವ ಮುನ್ನ ಮನೆಯನ್ನು ಅಲಂಕರಿಸಿದ ಕಳ್ಳ….!

ಯಾರೂ ಇರದುದನ್ನು ಖಾತ್ರಿಪಡಿಸಿಕೊಂಡ ಕಳ್ಳರು ಮಹಿಳೆಯೊಬ್ಬರ ಅಪಾರ್ಟ್‌ಮೆಂಟ್‌ಗೆ ನುಗ್ಗಿ, ಕ್ರಿಸ್ಮಸ್ ಟ್ರೀ ಜೊತೆ ಲಿವಿಂಗ್ ರೂಮ್ ಅನ್ನು ಪುನಃ ಅಲಂಕರಿಸಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲ ಕಳ್ಳರು ಮನೆಯ ಬೀಗಗಳನ್ನು ಕೂಡ ಬದಲಾಯಿಸಿದ್ದಾರೆ.

ಜಾರ್ಜಿಯಾದ ಸ್ಯಾಂಡಿ ಸ್ಪ್ರಿಂಗ್ಸ್‌ನಲ್ಲಿರುವ ಮಹಿಳೆಯೊಬ್ಬರು ತಮ್ಮ ಮನೆಯಿಂದ 30 ದಿನಗಳವರೆಗೆ ದೂರವಿದ್ದರಂತೆ. ಈ ವೇಳೆ ಇವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಬೀಗ ಹಾಗೂ ಮರು ಅಲಂಕಾರ ಮಾಡಿರುವುದನ್ನು ಕಂಡು ಇವರು ಆಶ್ಚರ್ಯಕ್ಕೊಳಗಾಗಿದ್ದಾರೆ.

ಶೈನಾ ರೈಸ್ ಎಂಬುವವರು ಟಿಕ್‌ಟಾಕ್‌ನಲ್ಲಿ ತನ್ನ ಮನೆಯ ಬದಲಾದ ಲುಕ್ ನ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಯಲ್ಲಿ, ಅಪರಿಚಿತರು ಶೈನಾಳ ಅಪಾರ್ಟ್ಮೆಂಟ್ ಗೆ ನುಗ್ಗಿದ್ದು, ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಪ್ಯಾಕ್ ಮಾಡಿದ್ದಾರೆ. ಹಾಗೂ ಮನೆಯ ಕೆಲವು ಭಾಗಗಳನ್ನು ಮರು ಅಲಂಕರಿಸಿದ್ದಾರೆ.

ಘಟನೆ ನಡೆದಾಗ ತಾನು 30 ದಿನಗಳ ಕಾಲ ಅಪಾರ್ಟ್‌ಮೆಂಟ್‌ನಿಂದ ದೂರವಿದ್ದೆ ಎಂದು ಶೈನಾ ರೈಸ್ ಹೇಳಿದ್ದಾರೆ. ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಶಂಕಿತ ವ್ಯಕ್ತಿಗಳು, ಒಬ್ಬ ಪುರುಷ ಮತ್ತು ಮಹಿಳೆ ಅಪಾರ್ಟ್‌ಮೆಂಟ್‌ನೊಳಗೆ ನಡೆದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ.

ಇನ್ನು ತನಿಖೆಯ ವೇಳೆ ಪೊಲೀಸರು ತನ್ನ ಮನೆಯೊಳಗೆ ಬಂದೂಕು ಮತ್ತು ಚಾಕುವನ್ನು ಕಂಡುಕೊಂಡಿದ್ದಾರೆ ಎಂದು ರೈಸ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...