alex Certify ಪವರ್ ‌ಲೂಮ್ ಸೆಂಟರ್ ಕನ್ನ ಹಾಕುವಾಗ ಬಾಗಿಲಲ್ಲಿ ತಲೆ ಸಿಲುಕಿ ಸಾವನ್ನಪ್ಪಿದ ಕಳ್ಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪವರ್ ‌ಲೂಮ್ ಸೆಂಟರ್ ಕನ್ನ ಹಾಕುವಾಗ ಬಾಗಿಲಲ್ಲಿ ತಲೆ ಸಿಲುಕಿ ಸಾವನ್ನಪ್ಪಿದ ಕಳ್ಳ

ಪವರ್ ಲೂಮ್ ಸೆಂಟರ್‌ಗೆ ಕನ್ನ ಹಾಕಲು ಯತ್ನಿಸಿದ ಕಳ್ಳನ ತಲೆ ಬಾಗಿಲಿಗೆ ಸಿಲುಕಿ ಸಾವನ್ನಪ್ಪಿರುವ ವಿಲಕ್ಷಣ ಘಟನೆ ವಾರಣಾಸಿಯ ಸಾರನಾಥ ಪ್ರದೇಶದ ದಾನಿಯಾಲ್‌ಪುರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಪೊಲೀಸರ ಪ್ರಕಾರ ನಿಜಾಮ್ ಎಂಬ ವ್ಯಕ್ತಿಗೆ ಸೇರಿದ ಪವರ್ ಲೂಮ್ ಸೆಂಟರ್ ಕಳೆದ ಎರಡು ದಿನಗಳಿಂದ ಮುಚ್ಚಲಾಗಿತ್ತು. ಈ ವೇಳೆ ಜಾವೇದ್ (30) ಎಂಬಾತ ಕಳ್ಳತನಕ್ಕೆ ಪ್ರಯತ್ನಿಸಿದ್ದ. ಈತ ಇತರ ಕಳ್ಳತನ ಪ್ರಕರಣಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ.

ಪವರ್ ಲೂಮ್ ಕೇಂದ್ರದ ಬಾಗಿಲಿನ ಮೇಲ್ಭಾಗದಲ್ಲಿ ಬೀಗ ಹಾಕಿರುವುದು ತಿಳಿಯದೆ ಆತ ಒಳ ನುಗ್ಗಲು ಯತ್ನಿಸಿದ್ದ. ತಲೆ ಬಾಗಿಲ ನಡುವೆ ಸಿಲುಕಿಕೊಂಡ. ಅವನ ದೇಹದ ಉಳಿದ ಭಾಗಗಳು ಹೊರಗೆ ಇದ್ದವು, ಹೊರ ಬರಲಾಗದೆ, ಒಳಗೂ ಹೋಗಲಾಗದೇ ಅಲ್ಲೇ ನರಳಿ ಸತ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...