alex Certify ಪ್ಯೂಮಿಕ್ ಕಲ್ಲನ್ನು ಬಳಸಿ ಪಾದಗಳ ಕೊಳೆ ಹೀಗೆ ತೆಗೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯೂಮಿಕ್ ಕಲ್ಲನ್ನು ಬಳಸಿ ಪಾದಗಳ ಕೊಳೆ ಹೀಗೆ ತೆಗೆಯಿರಿ

ನಾವು ಪಾದಗಳನ್ನು ನಿರ್ಲಕ್ಷಿಸುತ್ತೇವೆ. ಅವುಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ, ಇದರಿಂದ ಪಾದಗಳು ಒಣಗುತ್ತವೆ. ಅವುಗಳ ಮೇಲೆ ಕೊಳೆ ಕುಳಿತುಕೊಳ್ಳುತ್ತದೆ. ಇದನ್ನು ಗಟ್ಟಿಯಾಗಿ ಉಜ್ಜಿದಾಗ ರಕ್ತಸ್ರಾವವಾಗುತ್ತದೆ. ಇಂತಹ ಸಮಸ್ಯೆಯನ್ನು ನಿವಾರಿಸಲು ಈ ಕಲ್ಲನ್ನು ಬಳಸಿ.

ಚರ್ಮದಿಂದ ಕೊಳೆಯನ್ನು ತೆಗೆಯಲು ಪ್ಯೂಮಿಕ್ ಕಲ್ಲನ್ನು ಬಳಸಲಾಗುತ್ತದೆ. ಇದರಿಂದ ಆರಾಮದಾಯಕವಾಗಿ ಪಾದದ ಸ್ಕ್ರಬಿಂಗ್ ಮಾಡಬಹುದು. ಇದನ್ನು ಬಳಸುವ ಸರಿಯಾದ ಮಾರ್ಗ ಇಲ್ಲಿದೆ.

ಒಂದು ಬಕೆಟ್ ಉಗುರು ಬೆಚ್ಚಗಿರುವ ನೀರಿಗೆ ಶಾಂಪು ಸೇರಿಸಿ 10-15 ನಿಮಿಷ ನಿಮ್ಮ ಕಾಲನ್ನು ನೆನೆಸಿಡಿ. ಬಳಿಕ ಪ್ಯೂಮಿಕ್ ಕಲ್ಲನ್ನು ಕೆಲವು ಸೆಕೆಂಡುಗಳ ಕಾಲ ಮುಳುಗಿಸಿ. ಇದರಿಂದ ಚರ್ಮದ ಮೇಲೆ ಸುಲಭವಾಗಿ ಉಜ್ಜಬಹುದು. ಬಳಿಕ ಪಾದವನ್ನು ಹೊರಗೆ ತೆಗೆದು ಪ್ಯೂಮಿಕ್ ಕಲ್ಲಿನಿಂದ 5 ನಿಮಿಷ ವೃತ್ತಾಕಾರದಲ್ಲಿ ಉಜ್ಜಿ. ಬಳಿಕ ನೀರಿನಲ್ಲಿ ತೊಳೆದು ಒರೆಸಿಕೊಳ್ಳಿ. ಕೊನೆಯಲ್ಲಿ ಮಾಯಿಶ್ಚರೈಸರ್ ಕ್ರಿಂ ಹಚ್ಚಿ. ಇದರಿಂದ ಪಾದಗಳು ಕ್ಲೀನ್ ಆಗಿ ಮೃದುವಾಗಿ ಹೊಳೆಯುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...