ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಒಂದಷ್ಟು ನಿರ್ಣಯಗಳಿಗೆ ಬರಲಾಗಿದೆ. ಬುಧವಾರ ತೆಗೆದುಕೊಂಡ ಈ ನಿರ್ಣಯಗಳಿಂದ ಪೇಮೆಂಟ್ಸ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ ಎನ್ನಲಾಗಿದೆ.
ಮಹತ್ವದ ಘೋಷಣೆಗಳು ಇಂತಿವೆ:
ಒಂದು ಡಿವೈಸ್ ಯುಪಿಐ ವಾಲೆಟ್
– ಸಣ್ಣ ಮೊತ್ತ ಪಾವತಿಗೆ ಯುಪಿಐ ವಾಲೆಟ್
– ಅಂತರ್ಜಾಲವಿಲ್ಲದೆಯೂ ಆಫ್ಲೈನ್ ವಹಿವಾಟುಗಳು ಸಾಧ್ಯ.
– ಯುಪಿಐ ಮೂಲಕ ಸ್ಮಾರ್ಟ್‌ಫೋನ್ ಹಾಗೂ ಅಂತರ್ಜಾಲದ ನೆರವಿನಿಂದ ವಾಲೆಟ್‌ನಲ್ಲಿ ದುಡ್ಡು ಹಾಕುವುದು.
– ಗ್ರಾಹಕ ವ್ಯವಹಾರ ವೈಫಲ್ಯದ ಬಗ್ಗೆ ದೂರುವುದಿಲ್ಲ.
– ಬ್ಯಾಂಕ್ ಸರ್ವೇಗಳ ಮೇಲಿನ ಹೊರೆ ಇಳಿಸಲಾಗುವುದು, ಸಂಪನ್ಮೂಲಗಳ ಮೇಲಿನ ವೆಚ್ಚ ತಗ್ಗಿಸಲಾಗುವುದು.
– ಪ್ರೀಪೇಯ್ಡ್ ಉಪಕರಣಗಳಂತೆಯೇ ಆನ್-ಡಿವೈಸ್ ಯುಪಿಐ ವಾಲೆಟ್.
– ಯುಪಿಐ ವಹಿವಾಟಿನ 50% ಪಾವತಿ 200 ರೂ.ಗಳಿಗಿಂತ ಕಡಿಮೆ ಇದೆ.
– ಗ್ರಾಹಕರಿಗೆ ವಹಿವಾಟಿನ ಅನುಭವದಲ್ಲಿ ಯಾವುದೇ ಬದಲಾವಣೆ ಇಲ್ಲ.
– ಯುಪಿಐ ವಾಲೆಟ್‌ನಲ್ಲಿ ಸಣ್ಣ ಪಾವತಿಗಳಿಗೆ ನಿಗದಿತ ಮೊತ್ತದ ಮಿತಿ ಇಲ್ಲ.
BIG NEWS: JDS ಟಿಕೆಟ್ ಕೈತಪ್ಪಲು ‘ಮೈಸೂರು ಮಹಾರಾಜ’ರು ಕಾರಣ; ಸಂದೇಶ್ ನಾಗರಾಜ್ ಗಂಭೀರ ಆರೋಪ
ಫೋನ್‌ಗಳಿಗೆ ಫೀಚರ್ ಯುಪಿಐ:
– ದೇಶದಲ್ಲಿ ಸದ್ಯ ಇರುವ 44 ಕೋಟಿ ಚಂದಾದಾರರಿಗೆ ಇದು ವರದಾನವಾಗಲಿದೆ.
– ಅಂತರ್ಜಾಲ ಸಂಪರ್ಕವಿಲ್ಲದ ಫೋನ್‌ಗಳಿಗೆ ಯುಪಿಐ ಪಾವತಿ ಸೌಲಭ್ಯ.
– ಸ್ಯಾಂಡ್‌ಬಾಕ್ಸ್ ನಿಯಂತ್ರಣದ ಮೂಲಕ ರೀಟೇಲ್ ಪಾವತಿಗಳು.
– ಯುಪಿಐಗೆ ಸೇರುವ ಭವಿಷ್ಯದ ಫೋನ್ ಗ್ರಾಹಕರಿಗೆ ಬಿಎನ್‌ಪಿಎಲ್ ಅರ್ಹತೆ.
– ಡಿಜಿಟಲ್ ಪಾವತಿಗಳ ಶುಲ್ಕಗಳನ್ನು ಎಲ್ಲರ ಕೈಗೆಟುಕುವಂತೆ ಮಾಡುವುದು.
– ಡೆಬಿಟ್/ಕ್ರೆಡಿಟ್ ಕಾಡ್‌ಗಳು ಹಾಗೂ ಪಿಪಿಐ ಮೇಲಿನ ಚರ್ಚಾ ಪ್ರತಿಗಳನ್ನು ವಿತರಿಸಲಾಗುವುದು.
– ವರ್ತಕರೊಂದಿಗೆ ಲಿಂಕ್ ಆದ ಎಂಡಿಆರ್ ಶುಲ್ಕಗಳ ಪರಿಗಣಿಸಲಾಗುವುದು.
– ಎಂಡಿಆರ್ ವರ್ತಕರ ಶುಲ್ಕಗಳನ್ನು ಸೇವಾದಾರರು ಭರಿಸಬೇಕಾಗುತ್ತದೆ.
– ಪೇಮೆಂಟ್‌ಗಳ ಮೇಲೆ ಮಾಡಲಾಗುವ ಕಂಬೈನ್ಡ್ ಶುಲ್ಕ ಹಾಗೂ ಸರ್ಚ್ ಶುಲ್ಕಗಳ ಮೇಲೆ ಫೀಡ್‌ಬ್ಯಾಕ್ ಪಡೆಯಲಾಗುವುದು.
ಯೋನೋ ಆಪ್ ಮೂಲಕ ಪೂರ್ವಾನುಮೋದಿತ ಸಾಲ ಪಡೆಯುವ ಕುರಿತು ಇಲ್ಲಿದೆ ಮಾಹಿತಿ
ಯುಪಿಐ ಮೂಲಕ ಹೂಡಿಕೆ 2 ಲಕ್ಷ ರೂನಿಂದ 5 ಲಕ್ಷ ರೂ.ಗೆ ಏರಿಕೆ
– ರೀಟೇಲ್ ನೇರ ಸ್ಕೀಂನಲ್ಲಿ ಹೂಡಿಕೆಯ ಮಿತಿಯನ್ನು ಎರಡು ಲಕ್ಷ ರೂಪಾಯಿಯಿಂದ ಐದು ಲಕ್ಷ ರೂ.ಗಳಿಗೆ ಏರಿಕೆ.
– ಜಿ-ಸೆಕ್ ಮೂಲಕ, ಯುಪಿಐ ಮುಖಾಂತರ ಐದು ಲಕ್ಷ ರೂ.ಗಳವರೆಗೆ ಹೂಡಿಕೆ ಸಾಧ್ಯತೆ.
– ಐಪಿಓ ಹೂಡಿಕೆ ಮೇಲೆ ಯುಪಿಐ ಮೂಲಕ ಹೂಡಿಕೆ ಮಿತಿಯನ್ನು ಐದು ಲಕ್ಷ ರೂ.ಗಳಿಗೆ ಏರಿಸಲಾಗುವುದು.
– ಎರಡು ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗೂ ಎಚ್‌ಎನ್‌ಐನಲ್ಲಿ ಹೂಡಿಕೆ ಮಾಡಲು ಸೆಬಿ ಹೊಸ ಕೆಟಗರಿಯೊಂದನ್ನು ಅನ್ವೇಷಿಸುತ್ತಿದೆ.
ಇದೇ ವೇಳೆ, ರೆಪೋ ದರವನ್ನು 4 ಪ್ರತಿಶತದಲ್ಲಿ ಮುಂದುವರೆಸಲು ನಿರ್ಧರಿಸಿರುವ ಎಂಪಿಸಿ, ಹಿಮ್ಮುಖ ರೆಪೋ ದರದಲ್ಲೂ ಯಾವುದೇ ಬದಲಾವಣೆ ಮಾಡದೇ 3.5 ಪ್ರತಿಶತದಲ್ಲೇ ಇಡಲು ನಿರ್ಧರಿಸಿದೆ.