alex Certify ಎಚ್ಚರ..! ಒಂದು ಸೆಕೆಂಡ್ ನಲ್ಲಿ ಹ್ಯಾಕ್‌ ಆಗುತ್ತೆ ಈ PASSWORD | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ..! ಒಂದು ಸೆಕೆಂಡ್ ನಲ್ಲಿ ಹ್ಯಾಕ್‌ ಆಗುತ್ತೆ ಈ PASSWORD

ಚಿಕ್ಕ ಮಕ್ಕಳಿಗೂ ಈಗ ಪಾಸ್ ವರ್ಡ್ ಗೊತ್ತು. ಪಾಸ್ ವರ್ಡ್ ಜೀವನದ ಒಂದು ಭಾಗವಾಗಿದೆ. ಮೊಬೈಲ್‌ ಪಾಸ್ ವರ್ಡ್, ಲ್ಯಾಪ್‌ಟಾಪ್‌ ಪಾಸ್ ವರ್ಡ್, ಬ್ಯಾಂಕ್‌ ಪಾಸ್ ವರ್ಡ್ ಹೀಗೆ ಎಲ್ಲದಕ್ಕೂ ಒಂದೊಂದು ಪಾಸ್ ವರ್ಡ್ ಹಾಕಿರುತ್ತೇವೆ. ಅನೇಕರಿಗೆ ಎಲ್ಲ ಪಾಸ್ ವರ್ಡ್ ನೆನಪಿರುವುದಿಲ್ಲ. ಹಾಗಾಗಿ ನೆನಪಿರುವಂತಹ ಸುಲಭ ಪಾಸ್ ವರ್ಡ್ ಬಳಸುತ್ತಾರೆ. ಆದ್ರೆ ಚಿಕ್ಕದಾದ ಮತ್ತು ಸುಲಭವಿರುವ ಪಾಸ್ ವರ್ಡ್, ಹ್ಯಾಕರ್ಸ್ ಗೆ ಆಹಾರವಾಗುತ್ತದೆ.

ಪಾಸ್ ವರ್ಡ್ ನಿರ್ವಹಣಾ ಕಂಪನಿ ನಾರ್ಡ್‌ಪಾಸ್ 2021 ರ ದುರ್ಬಲ ಪಾಸ್ ವರ್ಡ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದ್ರ ಪ್ರಕಾರ, ದುರ್ಬಲ ಪಾಸ್ ವರ್ಡ್,123456 ಆಗಿದೆ. ಎರಡನೇ ಸ್ಥಾನದಲ್ಲಿ 123456789 ಪಾಸ್ ವರ್ಡ್ ಬರುತ್ತದೆ. ಮೂರನೇ ದುರ್ಬಲಪಾಸ್ ವರ್ಡ್ 12345 ಎಂದು ಕಂಪನಿ ಹೇಳಿದೆ.

ಇನ್ನು ಕಂಪನಿ ಭಾರತದಲ್ಲಿ ಯಾವುದು ದುರ್ಬಲ ಪಾಸ್ ವರ್ಡ್ ಎಂಬುದನ್ನೂ ಹೇಳಿದೆ. ಅದರ ಪ್ರಕಾರ, PASSWORD ದೇಶದ ದುರ್ಬಲ ಪಾಸ್ ವರ್ಡ್ ಆಗಿದೆಯಂತೆ. ಪಾಸ್ ವರ್ಡ್ ಸ್ಪೆಲ್ಲಿಂಗನ್ನೇ ಪಾಸ್ ವರ್ಡ್ ಮಾಡಿಕೊಂಡವರ ಸಂಖ್ಯೆ 17 ಲಕ್ಷಕ್ಕೂ ಹೆಚ್ಚಿದೆಯಂತೆ.

12345, 123456, 123456789  ಇವುಗಳನ್ನು ಭಾರತದಲ್ಲಿ ಕ್ರಮವಾಗಿ 12 ಲಕ್ಷ, 11 ಮತ್ತು 2 ಲಕ್ಷಕ್ಕೂ ಹೆಚ್ಚು ಜನರು ಪಾಸ್ ವರ್ಡ್ ಮಾಡಿದ್ದಾರೆ. ಭಾರತದಲ್ಲಿ 123ಯನ್ನು ಪಾಸ್ ವರ್ಡ್ ಮಾಡುವವರ ಸಂಖ್ಯೆ 1 ಲಕ್ಷದ 26 ಸಾವಿರ. ಇದಲ್ಲದೆ, Qwerty ಮತ್ತು abc123 ಭಾರತದಲ್ಲಿ ದುರ್ಬಲ ಪಾಸ್ವರ್ಡ್ ಆಗಿದೆ.

India123 ಹೊರತುಪಡಿಸಿ, ಎಲ್ಲಾ ಇತರ ಪಾಸ್ವರ್ಡ್‌ಗಳನ್ನು ಯಾವುದೇ ಹ್ಯಾಕರ್‌ 1 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಭೇದಿಸಬಹುದಂತೆ. India123 ಹ್ಯಾಕ್ ಮಾಡಲು 17 ಸೆಕೆಂಡ್ ತೆಗೆದುಕೊಳ್ಳುತ್ತದೆಯಂತೆ. ಇದ್ರಲ್ಲಿ ಯಾವುದೇ ಪಾಸ್ ವರ್ಡ್ ನೀವಿಟ್ಟುಕೊಂಡಿದ್ದರೆ ಈಗ್ಲೇ ಬದಲಿಸಿ. ನಿಮ್ಮ ಮೊಬೈಲ್,‌ ಲ್ಯಾಪ್ ಟಾಪ್ ಕೂಡ ಹ್ಯಾಕರ್ ಬಾಯಿಗೆ ಆಹಾರವಾಗಬಹುದು ನೆನಪಿರಲಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...