alex Certify ಎಲ್ಲರ ಮನಸೂರೆಗೊಳ್ಳುತ್ತಿದೆ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿದ ಸೂರ್ಯಾಸ್ತದ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲರ ಮನಸೂರೆಗೊಳ್ಳುತ್ತಿದೆ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿದ ಸೂರ್ಯಾಸ್ತದ ಚಿತ್ರ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್) ಆಗಾಗ್ಗೆ ಭೂಮಿ ಹಾಗೂ ಆಗಸಗಳ ಅದ್ಭುತ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುತ್ತಲೇ ಇರುತ್ತದೆ. ಈ ಬಾರಿ ಸೂರ್ಯಾಸ್ತವನ್ನು ತನ್ನ ಎತ್ತರದಿಂದ ಸೆರೆ ಹಿಡಿದಾಗ ಅದೆಷ್ಟು ವರ್ಣರಂಜಿತವಾಗಿ ಮೂಡಿ ಬಂದಿದೆ ಎಂದು ತೋರಿಸಿದೆ ಐಎಸ್‌ಎಸ್‌.

ಫೆಬ್ರವರಿ ತಿಂಗಳಲ್ಲಿ ಅಟ್ಲಾಂಟಿಕ್ ಸಾಗರದ ಮೇಲೆ ಸಾಗುತ್ತಿದ್ದ ವೇಳೆ ಐಎಸ್‌ಎಸ್‌ನಿಂದ ಈ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. ಸೂರ್ಯಾಸ್ತಕ್ಕೂ ಸ್ವಲ್ಪ ಹೊತ್ತಿನ ಮುಂಚಿನ ಕಿರಣಗಳು ಭೂರಮೆಯನ್ನು ಬೆಳಗುತ್ತಿರುವ ಈ ದೃಶ್ಯಚಿತ್ತಾರ ಬಾಹ್ಯಾಕಾಶ ಆಸಕ್ತರ ಚಿತ್ತ ಸೆಳೆದಿದೆ.

ಈ ಚಿತ್ರಗಳನ್ನು ಅದಾಗಲೇ 52,000ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಸೂರ್ಯಸ್ತ ಈ ವಿಶಿಷ್ಟ ಆಯಾಮದ ನೋಟಕ್ಕೆ ಮಾರು ಹೋಗಿ ಅನೇಕರು ಮೆಚ್ಚುಗೆ ಕಾಮೆಂಟ್‌ಗಳನ್ನು ಹಾಕಿದ್ದಾರೆ.

“ತಂತ್ರಜ್ಞಾನ ಮತ್ತು ಬೆಳಕಿನ ಮುದ್ದಾದ ಪ್ರದರ್ಶನ, ಬ್ರೇವೋ!” ಎಂದು ನೆಟ್ಟಿಗರೊಬ್ಬರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...