alex Certify ಈ ಐಡ್ರಾಪ್​ ಬಳಸಿದ ಬಳಿಕ ಬದಲಿಸಬಹುದು ಓದುವ ಕನ್ನಡಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಐಡ್ರಾಪ್​ ಬಳಸಿದ ಬಳಿಕ ಬದಲಿಸಬಹುದು ಓದುವ ಕನ್ನಡಕ…!

ಹೊಸ ರೀತಿಯ ಐ ಡ್ರಾಪ್​ ಅನ್ನು ಬಳಕೆಗಾಗಿ ಯು‌ಎಸ್ ಅನುಮೋದಿಸಿದೆ, ಇದು ಓದುವ ಕನ್ನಡಕಗಳ ಅಗತ್ಯವನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತಿದೆ.

ಎಫ್ ಡಿ ಎ (ಆಹಾರ ಮತ್ತು ಔಷಧ ಆಡಳಿತ) ಇತ್ತೀಚೆಗೆ ವಯಸ್ಸಿಗೆ ಸಂಬಂಧಿಸಿದ ಸಮೀಪ ದೃಷ್ಟಿ ಸುಧಾರಿಸಲು ವಿನ್ಯಾಸಗೊಳಿಸಿದ ಐ ಡ್ರಾಪ್​ ಬಳಕೆಯನ್ನು ಅನುಮೋದಿಸಿದೆ ಎಂದು ಸುದ್ದಿಮಾಧ್ಯಮಗಳು ವರದಿ ಮಾಡಿವೆ.

ವ್ಯುಟಿ ಎಂದು ಕರೆಯಲಾಗುವ ಡ್ರಾಪ್​ ಅನ್ನು ದಿನಕ್ಕೆ ಒಮ್ಮೆ ಪ್ರತಿ ಕಣ್ಣಿಗೆ ಹಾಕಬೇಕು ಮತ್ತು ಬಳಕೆ ಮಾಡಿದ 15 ನಿಮಿಷಗಳಲ್ಲಿ ಅದು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಪ್ರತಿ ಹನಿ ಕನಿಷ್ಠ ಆರು ಗಂಟೆಗಳ ಕಾಲ ಪ್ರಭಾವ ಹೊಂದಿರುತ್ತದೆ ಎಂದು ತಯಾರಕರು ಹೇಳುತ್ತಾರೆ.

ವರದಿಯ ಪ್ರಕಾರ, ಔಷಧವು ಪೈಲೊಕಾಪೈರ್ನ್​ ಎಂದು ಕರೆಯಲ್ಪಡುವ ಒಂದು ಪ್ರಸಿದ್ಧ ಸಂಯುಕ್ತದ ಸಮೀಕರಣವಾಗಿದೆ. ವ್ಯುಟಿಯ ಹಿಂದಿನ ಸಂಶೋಧಕರು ಟಿಯರ್​ ಫಿಲ್ಮ್​ನ ಪಿಎಚ್​ಗೆ ಕಣ್ಣಿನ ಡ್ರಾಪ್​ ತ್ವರಿತವಾಗಿ ಹೊಂದುವಂತೆ ವಿನ್ಯಾಸಗೊಳಿಸಿದ್ದಾರೆ.

ಕಣ್ಣಿನ ಗಾತ್ರವನ್ನು ಕಡಿಮೆ ಮಾಡುವ ಕಣ್ಣಿನ ಸಾಮರ್ಥ್ಯದ ಲಾಭವನ್ನು ಈ ಡ್ರಾಪ್​ನಿಂದ ಪಡೆದುಕೊಳ್ಳುವುದು, ದೂರದ ದೃಷ್ಟಿಯನ್ನು ಕಾಪಾಡಿಕೊಳ್ಳುವಾಗ ಸಮೀಪ ದೃಷ್ಟಿ ಸುಧಾರಿಸುವುದು. 40 ರಿಂದ 55 ವರ್ಷ ವಯಸ್ಸಿನವರಿಗೆ ಡ್ರಾಪ್​ ಹೆಚ್ಚು ಪರಿಣಾಮಕಾರಿ ಎಂದು ಕಂಡುಬಂದಿದೆ.

ಅಧ್ಯಯನಗಳ ಸಮಯದಲ್ಲಿ ವ್ಯುಟಿಯು ಅಪ್ಲಿಕೇಶನ್​ ಮಾಡಿದ 15 ನಿಮಿಷಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುವುದನ್ನು ಗಮನಿಸಲಾಯಿತು. ಡ್ರಾಪ್​ಗಳು ಯಾವುದೇ ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗುವುದಿಲ್ಲ ಎಂದು ಕಂಡುಬಂದಿದೆ. ಆದರೂ ಕೆಲವು ರೋಗಿಗಳು ಸಣ್ಣ ತಲೆನೋವು ಮತ್ತು ಕಣ್ಣು ಕೆಂಪಾಗುವಿಕೆಯನ್ನು ಅನುಭವಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...