alex Certify ರೋಗ ನಿರೋಧಕ ಶಕ್ತಿ ಒಳಗೊಂಡಿರುವ ಅಣಬೆ ಸೇವನೆಯಿಂದ ಪಡೆಯಬಹುದು ಹಲವು ಆರೋಗ್ಯಕರ ಅಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಒಳಗೊಂಡಿರುವ ಅಣಬೆ ಸೇವನೆಯಿಂದ ಪಡೆಯಬಹುದು ಹಲವು ಆರೋಗ್ಯಕರ ಅಂಶ

ಹಿಂದೆ ಸೀಸನಲ್ ಆಹಾರವಾಗಿದ್ದ ಅಣಬೆಯ ಕೃಷಿ ಆರಂಭವಾದ ಬಳಿಕ ಇದು ವರ್ಷವಿಡೀ ದೊರೆಯುವ ಪದಾರ್ಥವಾಗಿದೆ. ಇದರ ಸೇವನೆಯಿಂದ ಹಲವು ಆರೋಗ್ಯಕರ ಅಂಶಗಳನ್ನು ಪಡೆದುಕೊಳ್ಳಬಹುದು.

ಅಣಬೆಯಲ್ಲಿರುವ ಫ್ರೀ ಬಯೋಟಿಕ್ ಅಂಶ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಲಿವರ್ ಸಂಬಂಧಿ ಸಮಸ್ಯೆಗಳಿಂದಲೂ ದೂರವಿರಬಹುದು. ಡಯಾಬಿಟಿಸ್ ಇರುವವರು ಇದನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು.

ಹೃದಯ ಸಂಬಂಧಿ ಕಾಯಿಲೆಗಳನ್ನು ಬರದಂತೆ ನೋಡಿಕೊಳ್ಳುವ ಅಣಬೆ ದೇಹವನ್ನು ಗಟ್ಟಿಗೊಳಿಸುತ್ತದೆ. ಇದನ್ನು ಪಲ್ಯ, ಸಾಂಬಾರ್ ರೂಪದಲ್ಲೂ ಸೇವಿಸಬಹುದು. ಇಂದು ಹೊಟೇಲ್ ಗಳಲ್ಲಿ ಸಾಮಾನ್ಯ ತರಕಾರಿಗಳ ವೈವಿಧ್ಯದಂತೆ ಅಣಬೆ ವೆರೈಟಿಗಳೂ ಸೇವನೆಗೆ ಲಭ್ಯವಿರುತ್ತವೆ.

ಅಣಬೆಯನ್ನು ಸಸ್ಯಾಹಾರಿ ಎಂದೇ ಪರಿಗಣಿಸಲಾಗಿದೆ. ಅತ್ಯುತ್ತಮ ರೋಗ ನಿರೋಧಕ ಶಕ್ತಿ ಒಳಗೊಂಡಿರುವ ಅಣಬೆಯನ್ನು ಮಕ್ಕಳಿಗೂ ಕೊಡಬಹುದು. ಇದರಲ್ಲಿ ಪೌಷ್ಟಿಕಾಂಶಗಳು ಮತ್ತು ಪ್ರೊಟೀನ್ ಗಳು ಹೇರಳವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...