alex Certify ‘ರಾಜಯೋಗ’ ಚಿತ್ರದ ವಿಡಿಯೋ ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾಜಯೋಗ’ ಚಿತ್ರದ ವಿಡಿಯೋ ಹಾಡು ರಿಲೀಸ್

Rajayoga movie review; ರಾಜಯೋಗ ಜಾತಕದಿಂದಲ್ಲ, ಪ್ರಯತ್ನದಿಂದ | udayavani

ಸ್ಯಾಂಡಲ್ವುಡ್ ನಲ್ಲಿ ಹಾಸ್ಯ ಕಲಾವಿದನಾಗಿ ಮಿಂಚಿರುವ ಧರ್ಮಣ್ಣ ಕಡೂರು ನಾಯಕ ನಟನಾಗಿ ಅಭಿನಯಿಸುತ್ತಿರುವ ‘ರಾಜಯೋಗ’ ಚಿತ್ರದ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ”ಅಣ್ಣ ಬಂದ್ರೆ” ಎಂಬ ಈ ಹಾಡಿಗೆ ರವಿ ಸೊರಗಾವಿ ಮತ್ತು ವೇದಾವತಿ ಧ್ವನಿಯಾಗಿದ್ದು, ಲಿಂಗರಾಜ ಉಚ್ಚಂಗಿದುರ್ಗ ಸಾಹಿತ್ಯ ಬರೆದಿದ್ದಾರೆ.

ಲಿಂಗರಾಜ ಉಚ್ಚಂಗಿದುರ್ಗ ನಿರ್ದೇಶನದ ಈ ಚಿತ್ರವನ್ನು ರಾಮರತ್ನ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಕುಮಾರ ಕಂಠೀರವ ನಿರ್ಮಾಣ ಮಾಡಿದ್ದು, ಧರ್ಮಣ್ಣ ಕಡೂರು ಮತ್ತು ನಿರೀಕ್ಷ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ತಿಂಗಳು ಏಪ್ರಿಲ್ 5ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...