alex Certify ’ದಿ ಫ್ಯಾಮಿಲಿ ಮ್ಯಾನ್’ ಅನುಭವ ಹಂಚಿಕೊಂಡ ಸಮಂತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ದಿ ಫ್ಯಾಮಿಲಿ ಮ್ಯಾನ್’ ಅನುಭವ ಹಂಚಿಕೊಂಡ ಸಮಂತಾ

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) 52ನೇ ಮಹೋತ್ಸವದ ಸಂದರ್ಭದಲ್ಲಿ ಅಮೇಜ಼ಾನ್‌ ಪ್ರೈಂ ವಿಡಿಯೋ ಸೃಷ್ಟಿಸಿರುವ  ’ವಾಟ್ ಗೋಸ್ ಇಂಟೂ ಕ್ರಿಯೇಟಿಂಗ್ ಕಲ್ಟ್‌ ಐಕಾನ್ಸ್‌’ ಶೋ ಬಿತ್ತರಿಸಿದೆ.

’ಕ್ರಿಯೇಟಿಂಗ್ ಕಲ್ಟ್‌ ಐಕಾನ್ಸ್‌: ಇಂಡಿಯಾಸ್ ಓನ್ ಜೇಮ್ಸ್ ಬಾಂಡ್‌ (007)’ ಮಾಸ್ಕರ್‌ಕ್ಲಾಸ್‌‌‌ ಬಿತ್ತರಗೊಳ್ಳುವ ವೇಳೆ ಪ್ರಶಸ್ತಿ ವಿಜೇತ ಅಮೇಜ಼ಾನ್‌ನ ಒರಿಜಿನಲ್ ಸೀರೀಸ್‌ ’ದಿ ಫ್ಯಾಮಿಲಿ ಮ್ಯಾನ್’ನ ತಾರಾಗಣ ಉಪಸ್ಥಿತವಿತ್ತು. ಈ ಶೋ ಆಕ್ಷನ್, ಫ್ಯಾಮಿಲಿ ಡ್ರಾಮಾ, ಸಸ್ಪೆನ್ಸ್, ಭಾವನೆಗಳು, ಕಾಮಿಡಿಯಂಥ ಬಹು ಆಯಾಮಗಳಿಗೆ ಸೇರುತ್ತದೆ.

ಈ ವೇಳೆ ಮಾತನಾಡಿದ ನಟಿ ಸಮಂತ, ಶೋನಲ್ಲಿ ’ರಾಜಿ’ ಪಾತ್ರದಲ್ಲಿ ಅಭಿನಯಿಸಿದ ಕುರಿತು ಮಾತನಾಡಿ, “ಒಬ್ಬ ನಟಿಯಾಗಿ, ನನಗೆ ಯಾವಾಗಲೂ ಮಿತಿಗಳನ್ನು ವಿಸ್ತರಿಸಿ ಹೊಸ ಭಾವಗಳನ್ನು ಅನ್ವೇಷಿಸಲು ಇಷ್ಟ ಪಡುತ್ತೇನೆ. ಕಲಾವಿದೆಯರು ಸಾಮಾನ್ಯವಾಗಿ ಏಕ ಆಯಾಮದ ಪಾತ್ರಗಳಿಗೆ ಸೀಮಿತವಾಗಿಬಿಡುತ್ತಾರೆ ಈ ಕಾರಣದಿಂದಾಗಿ ನಿಮ್ಮ ಪ್ರದರ್ಶನ ಪದೇ ಪದೇ ಪುನರಾವರ್ತಿತವಾದಂತೆ ಭಾಸವಾಗುತ್ತದೆ.

ಇದು ಮಾಮೂಲಾದ ಭಾವಗಳನ್ನೇ ಆಯ್ದುಕೊಂಡಾಗ ಆಗುತ್ತದೆ. ಆದರೆ ರಾಜಿ ವಿಚಾರದಲ್ಲಿ ಹೇಳುವುದಾದರೆ, ಇದು ಬಹಳ ಭಿನ್ನವಾಗಿದ್ದು ಉತ್ಸಾಹಮಯವಾಗಿದೆ. ಈ ಪಾತ್ರವು ನನಗೆ ಹೊಸ ಆಯಾಮವೊಂದನ್ನು ಅನ್ವೇಷಿಸಲು ಅವಕಾಶ ಕೊಟ್ಟಿದೆ. ನನಗೆ ಹೀಗೆ ಹಿಂದೆ ಆಗಿರಲಿಲ್ಲ. ಈ ಸವಾಲನ್ನು ನನ್ನೊಳಗಿನ ನಟಿಗೆ ಇಲ್ಲವೆನ್ನಲು ಸಾಧ್ಯವಾಗಲಿಲ್ಲ,” ಎಂದು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...