alex Certify ಎದುರಾಳಿ ಪಾಕ್​ ವಿರುದ್ಧ ಗೆದ್ದ ಆ ರೋಚಕ ಕ್ಷಣ……ವೈರಲ್​ ವಿಡಿಯೋಗೆ​ ಪ್ರೇಮಿಗಳು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದುರಾಳಿ ಪಾಕ್​ ವಿರುದ್ಧ ಗೆದ್ದ ಆ ರೋಚಕ ಕ್ಷಣ……ವೈರಲ್​ ವಿಡಿಯೋಗೆ​ ಪ್ರೇಮಿಗಳು ಫಿದಾ

ಮೆಲ್ಬೋರ್ನ್​: ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾನುವಾರ ಮೆಲ್ಬೋರ್ನ್​ನಲ್ಲಿ ಭಾರತವು ವಿಜಯವನ್ನು ಸಾಧಿಸಿದ್ದರ ಕುರಿತು ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಈ ಪಂದ್ಯದ ನಂತರ ವಿರಾಟ್​ ಕೊಹ್ಲಿ ಅವರನ್ನು ಭಾರತೀಯರು ಹಾಡಿ ಹೊಗಳುತ್ತಿದ್ದಾರೆ.

ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿ ಬದುಕಿನ ಶ್ರೇಷ್ಠ ಪ್ರದರ್ಶನಗಳಲ್ಲಿ ಒಂದನ್ನು ಹೊರತಂದ ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ, ಕೇವಲ 53 ಎಸೆತಗಳಲ್ಲಿ ಅಜೇಯ 82 ರನ್‌ ಸಿಡಿಸಿ, 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು.

ಆ ರೋಚಕ ಕ್ಷಣದ ವಿಡಿಯೋ ಈಗ ವೈರಲ್​ ಆಗಿದೆ. 160 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ್ದ ಟೀಮ್ ಇಂಡಿಯಾ, 31 ರನ್‌ ಗಳಿಸುವ ಹೊತ್ತಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು.

ಆದರೆ, ಪಾಕಿಸ್ತಾನದ ಕಿಸೆಯಲ್ಲಿದ್ದ ಗೆಲುವನ್ನು ಭಾರತಕ್ಕೆ ಕಸಿದುಕೊಡುವಲ್ಲಿ ಯಶಸ್ಸು ಕಂಡ ವಿರಾಟ್‌ ಕೊಹ್ಲಿ, ತಂಡವನ್ನು ಜಯದ ದಡ ಮುಟ್ಟಿಸಿ ಭಾವುಕರಾದರು. ಈ ಸಂದರ್ಭದಲ್ಲಿ ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಭಾನುವಾರ ಸೇರಿದ್ದ 90 ಸಾವಿರಕ್ಕೂ ಹೆಚ್ಚಿನ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತ್ತು.

ಕೊನೆಯ ಕ್ಷಣದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾದ ರೋಚಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದ್ದು, ಭಾರತೀಯರು ಕಮೆಂಟ್​ಗಳ ಸುರಿಮಳೆಗೈದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...