alex Certify ಭಾರತದಲ್ಲೂ ಗೋಚರಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ, ಸೂತಕ ಕಾಲದಲ್ಲಿ ಮಾಡಬೇಡಿ ಈ ತಪ್ಪು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲೂ ಗೋಚರಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ, ಸೂತಕ ಕಾಲದಲ್ಲಿ ಮಾಡಬೇಡಿ ಈ ತಪ್ಪು…!

 

2023ರ ಕೊನೆಯ ಚಂದ್ರಗ್ರಹಣವು ಅಕ್ಟೋಬರ್ 28ರಂದು ಸಂಭವಿಸಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಸಹ ಗೋಚರಿಸುತ್ತದೆ. ಭಾರತದಲ್ಲಿ ಗೋಚರಿಸಬಹುದಾದ ಈ ವರ್ಷದ ಏಕೈಕ ಗ್ರಹಣ ಇದಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಅಕ್ಟೋಬರ್ 28 ಮತ್ತು 29ರ ಮಧ್ಯರಾತ್ರಿ ಚಂದ್ರಗ್ರಹಣ ಸಂಭವಿಸುತ್ತದೆ.

ಮಧ್ಯಾಹ್ನದಿಂದಲೇ ಗ್ರಹಣ ಸೂತಕದ ಅವಧಿ ಪ್ರಾರಂಭವಾಗುತ್ತದೆ. ಚಂದ್ರಗ್ರಹಣ ಅವಧಿ ಮತ್ತು ಸೂತಕ ಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ. ಅಲ್ಲದೆ ಕೆಲವು ತಪ್ಪುಗಳನ್ನು ಸಹ ಮಾಡಬಾರದು.

ಚಂದ್ರಗ್ರಹಣದ ಸಮಯದಲ್ಲಿ ಈ ತಪ್ಪನ್ನು ಮಾಡಬೇಡಿ

ಚಂದ್ರಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಆಹಾರ ಮತ್ತು ನೀರಿನಲ್ಲಿ ಹಾಕಲಾಗುತ್ತದೆ. ಇದು ಮಾಲಿನ್ಯದಿಂದ ರಕ್ಷಿಸುತ್ತದೆ ಎಂಬ ನಂಬಿಕೆ ಇದೆ.  ಇದರಿಂದ ಗ್ರಹಣದ ಸಮಯದಲ್ಲಿ ಹೊರಸೂಸುವ ಹಾನಿಕಾರಕ ಕಿರಣಗಳಿಂದ ಆಹಾರ ಪದಾರ್ಥಗಳು ಹಾಳಾಗುವುದಿಲ್ಲ. ಆದರೆ ಚಂದ್ರಗ್ರಹಣದ ಸಮಯದಲ್ಲಿ ತುಳಸಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮಾಡಬಾರದು. ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ.

– ಚಂದ್ರಗ್ರಹಣದ ಸಮಯದಲ್ಲಿ ತುಳಸಿ ಗಿಡವನ್ನು ಮುಟ್ಟಬೇಡಿ. ತುಳಸಿಯನ್ನು ಪೂಜಿಸಬೇಡಿ ಅಥವಾ ತುಳಸಿಗೆ ನೀರನ್ನು ಅರ್ಪಿಸಬೇಡಿ. ಚಂದ್ರಗ್ರಹಣ ಅಥವಾ ಸೂರ್ಯಗ್ರಹಣದ ಸಮಯದಲ್ಲಿ ತುಳಸಿಯನ್ನು ಮುಟ್ಟಬಾರದು.

– ಚಂದ್ರಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಮುಟ್ಟಬಾರದು. ಸೂತಕ ಪ್ರಾರಂಭವಾಗುವ ಮೊದಲು ತುಳಸಿ ಎಲೆಗಳನ್ನು ಕಿತ್ತು ಇಟ್ಟುಕೊಳ್ಳುವುದು ಉತ್ತಮ. ಗ್ರಹಣಕಾಲ ಪ್ರಾರಂಭಕ್ಕೂ ಮುನ್ನವೇ ತುಳಸಿ ಎಲೆಗಳನ್ನು ಆಹಾರ ಮತ್ತು ನೀರಿನಲ್ಲಿ ಸೇರಿಸಬಹುದು. ಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಕೀಳುವುದರಿಂದ ಲಕ್ಷ್ಮಿದೇವಿಗೆ ಕೋಪ ಬರುತ್ತದೆ. ಲಕ್ಷ್ಮಿ ಅಸಮಾಧಾನಗೊಂಡರೆ ಮನೆಯಲ್ಲಿ ಸಂಪತ್ತಿನ ಕೊರತೆ, ಆರ್ಥಿಕ ಸಮಸ್ಯೆ ಕಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...