alex Certify ಮಾರಾಟವಾಯ್ತು ಯುಎಸ್‌ನ ಈ ಭೂತ ಬಂಗಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರಾಟವಾಯ್ತು ಯುಎಸ್‌ನ ಈ ಭೂತ ಬಂಗಲೆ

2013ರಲ್ಲಿ ತೆರೆಕಂಡ ಹಾರರ್ ಚಲನಚಿತ್ರ ‘ದಿ ಕಂಜ್ಯೂರಿಂಗ್’ ಪ್ರೇರೇಪಿಸಿದ್ದ ಭೂತ ಬಂಗಲೆ ಈಗ ಬೋಸ್ಟನ್ ಡೆವಲಪರ್‌ಗೆ $1.525 ಮಿಲಿಯನ್ (ಅಂದಾಜು 11 ಕೋಟಿ ರೂ.) ಗೆ ಮಾರಾಟವಾಗಿದೆ.

ಅಮೆರಿಕಾದ ರೋಡ್ ಐಲ್ಯಾಂಡ್‌ನಲ್ಲಿರುವ ಫಾರ್ಮ್‌ಹೌಸ್ 18ನೇ ಶತಮಾನದ್ದು. ಈ ಮನೆಯನ್ನು ಬೋಸ್ಟನ್ ಡೆವಲಪರ್‌ಗೆ ನಿರೀಕ್ಷೆಗಿಂತ ಹೆಚ್ಚಿನ‌ ಬೆಲೆಗೆ ಮಾರಾಟವಾಗಿದೆ.

ಈ ಭೂತ ಬಂಗಲೆಯ ಖರೀದಿಗೆ ಬಹಳ ವರ್ಷ ಯಾರೂ ಮುಂದೆ ಬಂದಿರಲಿಲ್ಲ. ಈಗ ಒಬ್ಬಾಕೆ ತನ್ನ ಸ್ವಂತ ನಂಬಿಕೆ ವಿಶ್ವಾಸದ ಮೇಲೆ ಖರೀದಿಸಿದ್ದಾಳೆ.

ಈ ಖರೀದಿಯು ನನಗೆ ವೈಯಕ್ತಿಕವಾಗಿದೆ. ಇದು ರಿಯಲ್ ಎಸ್ಟೇಟ್ ಅಭಿವೃದ್ಧಿ ಅಲ್ಲ. ಇದು ನನ್ನ ಸ್ವಂತ ನಂಬಿಕೆ ಮೇಲಿನ ನಿರ್ಧಾರ ಎಂದು ವಂಡರ್‌ಗ್ರೂಪ್ ಎಲ್‌ಎಲ್‌ಸಿಯ ಮಾಲೀಕರಾದ ಖರೀದಿದಾರ ಜಾಕ್ವೆಲಿನ್ ನುನೆಜ್ ಮಾಧ್ಯಮಕ್ಕೆ ತಿಳಿಸಿದರು.

ರಾತ್ರಿ 12 ಗಂಟೆಗೆ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಇಡಿ ದಾಳಿ ಅಂತ್ಯ

ಇಲ್ಲಿಯ ಎನರ್ಜಿ ದುರುದ್ದೇಶಪೂರಿತವಾಗಿದೆ ಎಂದು ನಾನು ನಂಬುವುದಿಲ್ಲ. ಇಲ್ಲಿ ಘಟನೆಗಳು ನಡೆಯುತ್ತವೆ, ಅದು ನನ್ನನ್ನು ಬೆಚ್ಚಿಬೀಳಿಸುತ್ತದೆ, ಆದರೆ ನನಗೆ ಹಾನಿ ಮಾಡುವುದಿಲ್ಲ.‌ ಇದನ್ನು ಅನುಭವಿಸಲು ಬಯಸಿದ್ದೇನೆ ಎಂದು ಖರೀದಿದಾರರು ಹೇಳಿದ್ದಾರೆ.

‘ದಿ ಕಂಜ್ಯೂರಿಂಗ್’ ಹಾರರ್ ಚಲನಚಿತ್ರವನ್ನು ಈ ಮನೆಯಲ್ಲಿ ಚಿತ್ರೀಕರಿಸಲಾಗಿಲ್ಲ. ಆದರೆ 1970 ರ ದಶಕದಲ್ಲಿ ವಾಸಿಸುತ್ತಿದ್ದ ಕುಟುಂಬದ ಅನುಭವಗಳನ್ನು ಆಧರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...