alex Certify ಬಸ್ ನಲ್ಲಿ ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾದ ಪ್ರಯಾಣಿಕರು: 10 ರೂ. ಕೋಳಿ ಮರಿಗೆ ಅರ್ಧ ಚಾರ್ಜ್ 52 ರೂ. ಟಿಕೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ನಲ್ಲಿ ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾದ ಪ್ರಯಾಣಿಕರು: 10 ರೂ. ಕೋಳಿ ಮರಿಗೆ ಅರ್ಧ ಚಾರ್ಜ್ 52 ರೂ. ಟಿಕೆಟ್

ಶಿವಮೊಗ್ಗ: 10 ರೂಪಾಯಿ ಕೋಳಿ ಮರಿಗೆ ಬಸ್ ನಲ್ಲಿ ಅರ್ಧ ಚಾರ್ಜ್ ಮಾಡಿ 52 ರೂಪಾಯಿ ಟಿಕೆಟ್ ನೀಡಿದ ಘಟನೆ ನಡೆದಿದೆ.

ಅಲೆಮಾರಿ ಕುಟುಂಬವೊಂದು ಬೈಂದೂರು ತಾಲೂಕಿನ ಶಿರೂರಗೆ ತೆರಳುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೋಳಿ ಮರಿ ಖರೀದಿಸಿದೆ. 10 ರೂಪಾಯಿ ಕೊಟ್ಟು ಕೋಳಿಮರಿ ಖರೀದಿಸಲಾಗಿದ್ದು, ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಿರೂರಗೆ ತೆರಳಲು ಸರ್ಕಾರಿ ಬಸ್ ಹತ್ತಿದ್ದಾರೆ.

ಮೂವರು ಇದ್ದ ಅಲೆಮಾರಿ ಕುಟುಂಬದವರು ಕೋಳಿ ಮರಿ ಜೊತೆಗೆ ಒಯ್ಯುತ್ತಿರುವುದನ್ನು ಕಂಡ ಬಸ್ ಕಂಡಕ್ಟರ್ ಮೂವರ ಜೊತೆಗೆ ಕೋಳಿ ಮರಿಗೆ ಅರ್ಧ ಚಾರ್ಜ್ ನೀಡಿ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ನಿಯಮದ ಪ್ರಕಾರ ಅರ್ಧ ಟಿಕೆಟ್ ತೆಗೆದುಕೊಳ್ಳಬೇಕೆಂದು ಕಂಡಕ್ಟರ್ ಹೇಳಿದ್ದು, ಅಲೆಮಾರಿ ಕುಟುಂಬದವರು ಅರ್ಧ ಚಾರ್ಜ್ 52 ರೂಪಾಯಿ ಕೊಟ್ಟು ಕೋಳಿಮರಿಗೆ ಟಿಕೆಟ್ ಪಡೆದಿದ್ದಾರೆ.

10 ರೂಪಾಯಿ ಕೋಳಿ ಮರಿ ಜೊತೆಗೆ ಕೊಂಡೊಯ್ಯಲು ಅಲೆಮಾರಿ ಕುಟುಂಬದವರು 52 ರೂಪಾಯಿ ಟಿಕೆಟ್ ಪಡೆದ ಈ ವಿಚಾರ ಬಸ್ ಲ್ಲಿದ್ದ ಪ್ರಯಾಣಿಕರಿಗೂ ಸೋಜಿಗವೆನಿಸಿದೆ. ಟಿಕೆಟ್ ಪಡೆದ ಕೋಳಿ ಮರಿಯನ್ನು ಮಹಿಳೆ ಪಕ್ಕದ ಸೀಟ್ ನಲ್ಲೇ ಬಿಟ್ಟಿದ್ದಾರೆ. ಈ ಸ್ವಾರಸ್ಯಕರ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...