ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ರಸ್ತೆ ಅಪಘಾತದಲ್ಲಿ 25 ವರ್ಷಗಳ ಹಿಂದೆ ಮೃತಪಟ್ಟ ಬ್ರಿಟನ್ ಯುವರಾಣಿ ಡಯಾನಾ ಈಗಲೂ ಆಗಾಗ ಸುದ್ದಿಯಲ್ಲಿರುತ್ತಾರೆ.
1981ರಲ್ಲಿ ಜರುಗಿದ್ದ ಪ್ರಿನ್ಸ್ ಚಾರ್ಲ್ಸ್ ಮತ್ತು ಲೇಡಿ ಡಯಾನಾ ಸ್ಪೆನ್ಸರ್ರ ವಿವಾಹ ಮಹೋತ್ಸವ ಕೇಕ್ ತುಂಡೊಂದು ಬರೋಬ್ಬರಿ 1,850 ಪೌಂಡ್ ($2,578) ಸಂಪಾದಿಸಿದೆ. 1996ರಲ್ಲಿ ಈ ದಂಪತಿ ಬೇರ್ಪಟ್ಟರೂ ಸಹ ಅವರ ಮದುವೆಯ ಕೇಕ್ಗೂ ಈಗಿನ ಕಾಲದಲ್ಲೂ ಭಾರೀ ಆಸಕ್ತಿ ಇದೆ…!
ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿ
ಲಂಡನ್ನಲ್ಲಿ ನಡೆಸಲಾದ ಈ ಹರಾಜಿನಲ್ಲಿ ಲೀಡ್ಸ್ನ ಗೆರ್ರಿ ಲೇಟನ್ ಅತಿ ಹೆಚ್ಚಿನ ಮೊತ್ತ ನೀಡಿ ಕೇಕ್ ತುಂಡನ್ನು ಖರೀದಿಸಿದ್ದಾರೆ.
40 ವರ್ಷಗಳಷ್ಟು ಹಳೆಯದಾದ ಈ ಕೇಕ್ನ ಕ್ರೀಂ ಐಸಿಂಗ್ ಮೇಲೆ ಬ್ರಿಟನ್ ರಾಜಮನೆತನದ ಲಾಂಛನವಿದೆ. ಹರಾಜಿನಲ್ಲಿ ಕೇಕ್ ಸ್ಲೈಸ್ನ ಆರಂಭಿಕ ಬೆಲೆ 300-500 ಪೌಂಡ್ಗಳಷ್ಟಿತ್ತು. ಕೊನೆಯಲ್ಲಿ ಈ ಮೊತ್ತದ ಮೂರರಷ್ಟಕ್ಕೆ ಕೇಕ್ ಸ್ಲೈಸ್ ಮಾರಾಟವಾಗಿದೆ.