alex Certify ಕಲ್ಲಂಗಡಿ ಹಣ್ಣಿನ ಮೇಲೆ ಅದ್ಭುತ ಚಿತ್ತಾರ ಮೂಡಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಲಂಗಡಿ ಹಣ್ಣಿನ ಮೇಲೆ ಅದ್ಭುತ ಚಿತ್ತಾರ ಮೂಡಿಸಿದ ಮಹಿಳೆ

ಕಸದಲ್ಲಿ ಕಲೆ ಅರಳಿಸೋ ಕಲೆ ತುಂಬಾ ಜನರಿಗೆ ಗೊತ್ತು. ಆದರೆ ಇಲ್ಲೊಬ್ಬ ಮಹಿಳೆ ಕಲ್ಲಂಗಡಿ ಹಣ್ಣಿನಲ್ಲೇ ಅದ್ಬುತ ಕಲೆಯನ್ನ ಹೇಗೆ ಮಾಡಬಹುದು ಅನ್ನೋದನ್ನ ತೋರಿಸಿದ್ದಾಳೆ.

ಪ್ರತಿಭೆ, ಆಸಕ್ತಿ ಇವಿದ್ದರೆ ಮನುಷ್ಯ ಏನು ಬೇಕಾದರೂ ಮಾಡಬಹುದು ಅನ್ನೋದಕ್ಕೆ ಈ ವಿಡಿಯೋ ಒಂದು ಉತ್ತಮವಾದ ಉದಾಹರಣೆ. ನಾವೆಲ್ಲ ಕಲ್ಲಂಗಡಿ ಹಣ್ಣು ಅಂದಾಕ್ಷಣ ಅದನ್ನ ಕಟ್ ಮಾಡೋದು, ತಿನ್ನೋದು ಅಂತಷ್ಟೆ ಅಂದ್ಕೊಂಡು ಬಿಟ್ಟಿರ್ತೆವೆ. ಆದರೆ ಇಲ್ಲಿ ನೋಡಿ ಅದರಲ್ಲೂ ಒಬ್ಬರು ಎಂಥಹ ಅದ್ಭುತ ಕಲಾಕೃತಿಯನ್ನ ಕೆತ್ತಿ ತೋರಿಸಿದ್ದಾರೆ ಅಂತ.

ಇತ್ತೀಚೆಗೆ ಯೂಟ್ಯೂಬ್ ನೋಡಿ ಜನರು ಹೊಸ ಹೊಸ ಪ್ರಯತ್ನವನ್ನ ಮಾಡ್ತಾನೇ ಇರ್ತಾರೆ. ಕಸ ಅಂತ ಎಸೆಯುವ ವಸ್ತುಗಳಲ್ಲೇ ಹೊಸ ವಸ್ತುವನ್ನ ತಯಾರಿಸುತ್ತಾರೆ. ಇನ್ನೂ ಕೆಲವರು ತರಕಾರಿ, ಹಣ್ಣುಗಳಲ್ಲಿ, ಚಿತ್ತಾರಗಳನ್ನ ಬಿಡಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡ್ತಾರೆ. ಅದೇ ರೀತಿ ಇಲ್ಲಿ ಮಹಿಳೆಯೊಬ್ಬರು ಕಲ್ಲಂಗಡಿ ಹಣ್ಣಿನ ಸಿಪ್ಪೆಯಲ್ಲಿ ಬಿಡಿಸಿರೋ ಕಲಾಕೃತಿ ಅದ್ಭುತವಾಗಿದೆ.

BIG NEWS: ಭುಗಿಲೆದ್ದ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ; ಅನಗತ್ಯ ತಕರಾರು ಎತ್ತುವವರು ‘ವಿಚಾರ ನಪುಂಸಕರು’; ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೊ ಟಾಪ್ ವಿಡಿಯೋಗಳಲ್ಲಿ, ಈ ವಿಡಿಯೋ ಒಂದಾಗಿದೆ. ವೈರಲ್ ಆಗುತ್ತಿರೋ ಈ ವಿಡಿಯೋವನ್ನ ಬ್ಯುಟೆಂಗೆಬಿಡನ್ ಅನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ವಾಟರ್ ಮೆಲನ್ ಆರ್ಟ್ ಅನ್ನೊ ಕಾಪ್ಷನ್ ಕೊಟ್ಟಿದ್ದಾರೆ. ಇಷ್ಟು ದಿನ ಕಟ್ಟಿಗೆ ಮೇಲೆ ಇಲ್ಲಾ ಕಲ್ಲಿನ ಮೇಲೆ ಕೆತ್ತನೆ ಮಾಡಿರೋದನ್ನ ನೋಡಿದ್ದ ಜನ ಹಣ್ಣಿನ ಮೇಲೆ ಮಾಡಲಾಗಿರೋ ಈ ಕೆತ್ತನೆ ನೋಡಿ ಅದ್ಭುತ ಅಂತ ಹೇಳುತ್ತಿದ್ದಾರೆ. ಈ ವಿಡಿಯೋ ಈಗಾಗಲೇ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಪಡೆದುಕೊಂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...