alex Certify ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದ ‘ತಲೈವಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದ ‘ತಲೈವಿ’

ಸಾಕಷ್ಟು ನೀರಿಕ್ಷೆಯನ್ನು ಇಟ್ಟುಕೊಂಡಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​ ಅಭಿನಯದ ತಲೈವಿ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದೆ. ಗಣೇಶ ಚತುರ್ಥಿಯ ನಿಮಿತ್ತ ಶುಕ್ರವಾರದಂದು ಸಿನಿಮಾ ಬಿಡುಗಡೆ ಮಾಡಲಾಗಿತ್ತು.

ಎ ಎಲ್​ ವಿಜಯ್​ ನಿರ್ದೇಶನದ ಈ ಸಿನಿಮಾವು ಮೊದಲ ದಿನ ಕೇವಲ 1.25 ಕೋಟಿ ರೂಪಾಯಿ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ.

ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಜೀವನ ಆಧಾರಿತ ಈ ಸಿನಿಮಾ ಇಡೀ ದೇಶದಲ್ಲಿ ಕೇವಲ 1.25 ಕೋಟಿ ರೂಪಾಯಿ ಗಳಿಸಲು ಮಾತ್ರ ಶಕ್ತವಾಗಿದೆ. ಹಿಂದಿ ಭಾಷೆಗೆ ಹೋಲಿಸಿದ್ರೆ ದಕ್ಷಿಣ ಭಾರತದ ಭಾಷೆಗಳಲ್ಲಿಯೇ ಸಿನಿಮಾ ಕೊಂಚ ಹೆಚ್ಚಿನ ಗಳಿಕೆ ಸಂಪಾದಿಸಿದೆ.

ಹಿಂದಿ ಭಾಷೆಯಲ್ಲಿ ತಲೈವಿ ಮೊದಲ ದಿನ ಕೇವಲ 20-25 ಲಕ್ಷ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ. ಇದರಲ್ಲಿ ಉತ್ತರ ಪ್ರದೇಶ, ದೆಹಲಿ ಹಾಗೂ ಗುಜರಾತ್​​ನಲ್ಲಿ ಸಿನಿಮಾಗೆ ಕೊಂಚ ರೆಸ್ಪಾನ್ಸ್​ ಸಿಕ್ಕಿದೆ. ತಮಿಳುನಾಡಿನಲ್ಲಿ ಈ ಸಿನಿಮಾ ಬಾಕ್ಸಾಫೀಸಿನಲ್ಲಿ ಸದ್ದು ಮಾಡಿದ್ದು 80 ಲಕ್ಷ ರೂಪಾಯಿ ಗಳಿಸಿದೆ.

ತಲೈವಿ ಸೇರಿದಂತೆ ಇತ್ತೀಚಿಗೆ ತೆರೆ ಕಂಡ ಶಾಂಗ್​-ಚಿ, ಟೆನ್​ ರಿಂಗ್ಸ್​, ಫಾಸ್ಟ್​ & ಫ್ಯೂರಿಯಸ್​, ಚೆಹ್ರೆ ಹಾಗೂ ಬೆಲ್​ ಬಾಟಂ ಮಹಾರಾಷ್ಟ್ರದಲ್ಲಿ ತೆರೆ ಕಂಡಿಲ್ಲ. ಕೊರೊನಾ 2ನೆ ಅಲೆಯ ಬಳಿಕ ಮಹಾರಾಷ್ಟ್ರದಲ್ಲಿ ಯಾವುದೇ ಸಿನಿಮಂದಿರಗಳು ಬಾಗಿಲು ತೆರೆದಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...