alex Certify ಕೋವಿಡ್​ ಸೋಂಕಿನಿಂದಾಗಿ ಟೋಕಿಯೋ ಒಲಿಂಪಿಕ್​ನಿಂದ ಹೊರನಡೆದ ಖ್ಯಾತ ಟೆನ್ನಿಸ್​ ಆಟಗಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಸೋಂಕಿನಿಂದಾಗಿ ಟೋಕಿಯೋ ಒಲಿಂಪಿಕ್​ನಿಂದ ಹೊರನಡೆದ ಖ್ಯಾತ ಟೆನ್ನಿಸ್​ ಆಟಗಾರ..!

ಆಸ್ಟ್ರೇಲಿಯಾದ ಟೆನ್ನಿಸ್​ ಆಟಗಾರ ಅಲೆಕ್ಸ್​​ ಡಿ ಮಿನೌರ್​​ಗೆ ಕೊರೊನಾ ಸೋಂಕು ತಗುಲಿದ್ದು ಟೋಕಿಯೋ ಒಲಿಂಪಿಕ್ಸ್​ನಿಂದ ಹೊರನಡೆದಿದ್ದಾರೆ. ಆಸ್ಟ್ರೇಲಿಯಾದ ಒಲಿಂಪಿಕ್​ ತಂಡದ ಮುಖ್ಯಸ್ಥ ಇಯಾನ್​ ಚೆಸ್ಟರ್ಮನ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

ಅಲೆಕ್ಸ್​ ಬಾಲ್ಯದಿಂದಲೇ ಒಲಿಂಪಿಕ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನ ಪ್ರತಿನಿಧಿಸುವ ಕನಸನ್ನ ಹೊಂದಿದಂತವರು. ಆದರೆ ಇದೀಗ ಕೊರೊನಾ ಸೋಂಕಿನಿಂದಾಗಿ ಪಂದ್ಯ ಆರಂಭಕ್ಕೂ ಮುನ್ನವೇ ಅಲೆಕ್ಸ್​ ಹೊರನಡೆಯುತ್ತಿರೋದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಚೆಸ್ಟರ್ಮನ್​ ಹೇಳಿದ್ದಾರೆ.

ಆಸ್ಟ್ರೇಲಿಯಾದ ಖ್ಯಾತ ಟೆನ್ನಿಸ್​ ಆಟಗಾರರ ಪೈಕಿ ಒಬ್ಬರಾದ ಅಲೆಕ್ಸ್​ ವಿಶ್ವ ಶ್ರೇಯಾಂಕಿತರ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಅಲೆಕ್ಸ್​ ಸಿಂಗಲ್ಸ್ ಹಾಗೂ ಡಬಲ್ಸ್ ​ಗಳೆರಡರಲ್ಲಿಯೂ ಆಸ್ಟ್ರೇಲಿಯಾವನ್ನ ಪ್ರತಿನಿಧಿಸುವವರಿದ್ದರು. ಡಬಲ್ಸ್​ನಲ್ಲಿ ಅಲೆಕ್ಸ್​ ಸಹ ಆಟಗಾರರಾಗಿದ್ದ ಜೋನ್​ ಪಿಯರ್ಸ್ ಒಲಿಂಪಿಕ್​ನಲ್ಲಿ ಮುಂದುವರಿಯುತ್ತಾರಾ ಇಲ್ಲವಾ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...