alex Certify ಬೆರಗಾಗಿಸುತ್ತೆ ಕೋವಿಡ್‌-19 ನಡುವೆಯೂ ಅಬ್ಬರಿಸಿದ ’ಉಪ್ಪೇನಾ’ ಚಿತ್ರದ ಕಲೆಕ್ಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಕೋವಿಡ್‌-19 ನಡುವೆಯೂ ಅಬ್ಬರಿಸಿದ ’ಉಪ್ಪೇನಾ’ ಚಿತ್ರದ ಕಲೆಕ್ಷನ್

ಕೋವಿಡ್-19 ಲಾಕ್‌ಡೌನ್‌ನಿಂದ ನಿಧಾನವಾಗಿ ಹೊರಬರುತ್ತಿರುವ ಚಿತ್ರೋದ್ಯಮಕ್ಕೆ ಹೊಸ ನಿರ್ಬಂಧಗಳ ನಡುವೆ ಚಿತ್ರಗಳ ಬಿಡುಗಡೆ ಸಂಬಂಧ ಇದ್ದ ಆತಂಕಗಳನ್ನು ತೆಲುಗು ಸಿನಿಮಾ ’ಉಪ್ಪೇನಾ’ ದೂರ ಮಾಡಿದೆ.

ಬುಚ್ಚಿ ಬಾಬು ಸಾನಾ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಪಂಜ ವೈಷ್ಣವಿ ತೇಜ್ ಹಾಗೂ ಕ್ರಿತಿ ಶೆಟ್ಟಿ ಮುಂಚೂಣಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲೇ ಈ ಚಿತ್ರವು ಇದುವರೆಗೂ 28 ಕೋಟಿ ರೂ.ಗಳನ್ನು ಬಾಚಿಕೊಂಡಿದೆ.

ಫಿದಾ ಹಾಗೂ ಗೀತ ಗೋವಿಂದಮ್‌ ಚಿತ್ರಗಳು ಈ ಹಿಂದೆ ಮಾಡಿದ್ದ ಕಲೆಕ್ಷನ್ ದಾಖಲೆಯನ್ನು ಮುರಿಯುವ ಆಶಯವನ್ನು ’ಉಪ್ಪೇನಾ’ ಚಿತ್ರತಂಡ ಇಟ್ಟುಕೊಂಡಿದೆ.

ತಮಿಳು ಹಾಗೂ ತೆಲುಗು ಚಿತ್ರರಂಗಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಅಬ್ಬರಿಸಲು ಸಾಧ್ಯವಾಗದೇ ಇದ್ದರೂ ಸಹ ತಮ್ಮ ಚಿತ್ರಗಳಿಗೆ ಪ್ರೇಕ್ಷಕರ ಕೊರತೆಯನ್ನಂತೂ ಎದುರಿಸುತ್ತಿಲ್ಲ ಎಂದು ಬಾಕ್ಸ್ ಆಫೀಸ್ ಇಂಡಿಯಾ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...