alex Certify Viral Video| ಸಂದರ್ಶನದ ಮಧ್ಯೆ ಅಡ್ಡ ಬಂದ ಯುವಕ; ತಪರಾಕಿ ಕೊಟ್ಟ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video| ಸಂದರ್ಶನದ ಮಧ್ಯೆ ಅಡ್ಡ ಬಂದ ಯುವಕ; ತಪರಾಕಿ ಕೊಟ್ಟ ನಟಿ

ದುಬೈನಲ್ಲಿ ಇತ್ತೀಚೆಗೆ ‘ಸೈಮಾ ಅವಾರ್ಡ್’ ಸಮಾರಂಭ ಅದ್ದೂರಿಯಾಗಿ ನಡೆದಿದ್ದು, ಇದರಲ್ಲಿ ಖ್ಯಾತನಾಮ ನಟ – ನಟಿಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೆಲೆಬ್ರೆಟಿಗಳ ಸಂದರ್ಶನವೂ ಕೂಡ ಈ ವೇಳೆ ನಡೆದಿತ್ತು.

ಈ ರೀತಿಯ ಸಂದರ್ಶನದಲ್ಲಿ ಟಾಲಿವುಡ್ ನಟಿ ಲಕ್ಷ್ಮಿ ಮಂಚು ಪಾಲ್ಗೊಂಡಿದ್ದು, ಈ ವೇಳೆ ಯುವಕನೊಬ್ಬ ಅಡ್ಡ ಬಂದಿದ್ದಕ್ಕೆ ಗರಂ ಆದ ಅವರು ಅವನ ಬೆನ್ನ ಮೇಲೆ ಹೊಡೆದಿದ್ದಾರೆ. ಅಷ್ಟೇ ಅಲ್ಲ ತೆಲುಗಿನಲ್ಲಿ ಆತನಿಗೆ ಗದರಿದ್ದಾರೆ.

ಆದರೆ ದುರಾದೃಷ್ಟಕ್ಕೆ ಮತ್ತೊಬ್ಬ ಈ ಸಂದರ್ಶನಕ್ಕೆ ಇದೇ ವೇಳೆ ಅಡ್ಡ ಬಂದಿದ್ದು, ಆಗ ಮತ್ತಷ್ಟು ಕೆಂಡಾಮಂಡಲರಾದ ಲಕ್ಷ್ಮೀ ಮಂಚು, ‘Drrr’ ಎನ್ನುವುದರ ಜೊತೆಗೆ ಆತನನ್ನು ಅಲ್ಲಿಂದ ಹೋಗುವಂತೆ ಹೇಳಿದ್ದಾರೆ.

ಅವರ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಥರಹೇವಾರಿ ಕಾಮೆಂಟ್ ಗಳಿಗೆ ಕಾರಣವಾಗಿದೆ. ಬಹಳಷ್ಟು ಜನ ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರೆ, ಮತ್ತಷ್ಟು ಮಂದಿ ನಟಿ ಆ ರೀತಿ ವರ್ತಿಸಬಾರದಿತ್ತು ಎಂದಿದ್ದಾರೆ.

— The Curry Muncher (@Paprikaashh) September 23, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...