alex Certify ಹಾಸ್ಯ ನಟನ 115 ವರ್ಷದ ಕಾರಿಗೆ ಬೆಂಕಿ: ತೀವ್ರ ಸುಟ್ಟ ಗಾಯಗಳಿಂದ ಜೇ ಲೆನೋ ಆಸ್ಪತ್ರೆಗೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಸ್ಯ ನಟನ 115 ವರ್ಷದ ಕಾರಿಗೆ ಬೆಂಕಿ: ತೀವ್ರ ಸುಟ್ಟ ಗಾಯಗಳಿಂದ ಜೇ ಲೆನೋ ಆಸ್ಪತ್ರೆಗೆ ದಾಖಲು

ನ್ಯೂಯಾರ್ಕ್​: ಅಮೆರಿಕದ ಹಾಸ್ಯನಟ ಮತ್ತು ಟಿವಿ ನಿರೂಪಕ ಜೇ ಲೆನೋ ಅವರ 115 ವರ್ಷ ಹಳೆಯದಾದ ಕಾರು ಲಾಸ್ ಏಂಜಲೀಸ್ ಗ್ಯಾರೇಜ್‌ನಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಜೇ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಅವರನ್ನು ಸ್ನೇಹಿತರೊಬ್ಬರು ರಕ್ಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಲೆನೋ ಅವರು 1907 ರ ತಮ್ಮ ವೈಟ್ ಸ್ಟೀಮ್ ಕಾರನ್ನು ರಿಪೇರಿ ಮಾಡುತ್ತಿದ್ದಾಗ ಕಾರು ಸಿಡಿದಿದ್ದು, ಮುಖ ಮತ್ತು ಕೈ ಸುಟ್ಟುಹೋಗಿವೆ. ಅದೃಷ್ಟವಶಾತ್​ ಅವರ ಕಣ್ಣುಗಳು ಮತ್ತು ಕಿವಿಗಳು ತೀವ್ರವಾಗಿ ಹಾನಿಗೊಳಗಾಗಲಿಲ್ಲ. ಅಲ್ಲಿಯೇ ಇದ್ದ ಇವರ ಸ್ನೇಹಿತ ಓಡಿಬಂದು ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

72 ವರ್ಷ ವಯಸ್ಸಿನ ಲೆನೋ ಅವರು ‘ಟುನೈಟ್ ಷೋ’ನಲ್ಲಿ ಭಾಗವಹಿಸಲು ಲಾಸ್ ವೇಗಾಸ್​ಗೆ ತೆರಳಬೇಕಿತ್ತು. ಜತೆಗೆ ಹಣಕಾಸು ಸಮ್ಮೇಳನದಲ್ಲಿ ಭಾಗವಹಿಸಬೇಕಿತ್ತು. ಆದರೆ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...