
ಟೆಲಿಗ್ರಾಂ ಬಳಕೆದಾರರ ಬೇಡಿಕೆಯಂತೆ ಕೊನೆಗೂ ವಿಡಿಯೋ ಕಾಲ್ ಸೌಲಭ್ಯವನ್ನ ಪರಿಚಯಿಸಿದೆ. ವಿಡಿಯೋ ಕಾಲ್ ಸೌಲಭ್ಯವನ್ನ ತರಲಿದ್ದೇವೆ ಎಂದು ಕಂಪನಿ ಹೇಳಿದ 1 ವರ್ಷದ ಬಳಿಕ ಇದು ಬಳಕೆದಾರರಿಗೆ ಲಭ್ಯವಾಗಲಿದೆ. ಮೊಬೈಲ್, ಟ್ಯಾಬ್ಲೆಟ್, ಡೆಸ್ಕ್ಟಾಪ್ನಲ್ಲಿ ವಿಡಿಯೋ ಕಾಲ್ ಸೌಲಭ್ಯವನ್ನ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಯಲ್ಲಿ ಆನಿಮೇಟೆಡ್ ಬ್ಯಾಕ್ಗ್ರೌಂಡ್, ಮೆಸೇಜ್ ಸೆಂಡಿಂಗ್ ಆನಿಮೇಷನ್, ಹೊಸ ಆನಿಮೇಟೆಡ್ ಇಮೋಜಿ ಸೇರಿದಂತೆ ಇನ್ನೂ ಹಲವು ಆಯ್ಕೆಗಳನ್ನ ಬಳಕೆದಾರರಿಗೆ ಪರಿಚಯಿಸಿದೆ.
ಲಸಿಕೆ ಪಡೆದವರಿಗೆ ಗುಡ್ ನ್ಯೂಸ್: ಕೊರೊನಾದ ಎಲ್ಲಾ ರೂಪಾಂತರಿಗಳ ವಿರುದ್ಧ ಕೋವಿಶೀಲ್ಡ್ – ಕೊವ್ಯಾಕ್ಸಿನ್ ಪರಿಣಾಮಕಾರಿ
ವಿಡಿಯೋ ಕಾಲ್ನ ಜೊತೆಯಲ್ಲಿ ಟೆಲಿಗ್ರಾಂ ಇನ್ನೊಂದು ಮಹತ್ವದ ಸೌಲಭ್ಯವನ್ನ ನೀಡಿದೆ. ಇದರ ಪ್ರಕಾರ ಆಡಿಯೋ ಕಾಲ್ಗಳನ್ನ ವಿಡಿಯೋ ಕಾಲ್ಗಳಾಗಿ ಪರಿವರ್ತನೆ ಮಾಡಬಹುದಾಗಿದೆ. ಇದಕ್ಕಾಗಿ ಬಳಕೆದಾರರು ಕ್ಯಾಮರಾ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಒಮ್ಮೆ ವಿಡಿಯೋ ಕಾಲ್ ಆರಂಭವಾದ ಬಳಿಕ ಪರದೆಯ ಮೇಲೆ ಸದಸ್ಯರ ಮುಖ ಕಾಣಲಿದೆ. ಅಲ್ಲದೇ ಕ್ಯಾಮರಾ ಹಾಗೂ ಸ್ಕ್ರೀನ್ ಎರಡನ್ನೂ ಒಮ್ಮೆಲೆ ತೋರಿಸಲು ಕೂಡ ಆಯ್ಕೆ ನೀಡಲಾಗಿದೆ.
ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್
ಇನ್ನು ಟ್ಯಾಬ್ಲೆಟ್ ಹಾಗೂ ಡೆಸ್ಕ್ ಟಾಪ್ನಲ್ಲಿ ವಿಡಿಯೋ ಕಾಲ್ ಮಾಡುವವರಿಗೆ ಇನ್ನೊಂದು ಹೆಚ್ಚಿನ ಸೌಲಭ್ಯ ನೀಡಲಾಗಿದೆ. ಇಲ್ಲಿ ವಿಡಿಯೋ ಕಾಲ್ ವೇಳೆ ಸ್ಪ್ಲಿಟ್ ಸ್ಕ್ರೀನ್ ಸೌಕರ್ಯ ಬಳಕೆ ಮಾಡಬಹುದು ಎಂದು ಟೆಲಿಗ್ರಾಂ ಹೇಳಿದೆ.