alex Certify 1 ಗಂಟೆ ಅವಧಿಯಲ್ಲಿ 1 ಮಿಲಿಯನ್​ ಸಸಿ ನೆಟ್ಟು ʼವಿಶ್ವ ದಾಖಲೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ಗಂಟೆ ಅವಧಿಯಲ್ಲಿ 1 ಮಿಲಿಯನ್​ ಸಸಿ ನೆಟ್ಟು ʼವಿಶ್ವ ದಾಖಲೆʼ

ಇತ್ತೀಚೆಗೆ ನಾಲ್ಕು ವಸಂತಗಳನ್ನ ಪೂರೈಸಿದ ಗ್ರೀನ್​ ಇಂಡಿಯನ್​ ಚಾಲೆಂಜ್​​ನ ಭಾಗವಾಗಿ ತೆಲಂಗಾಣದ ಆದಿಲಾಬಾದ್​ ಜಿಲ್ಲೆಯಲ್ಲಿ ಕೇವಲ 1 ಗಂಟೆಯಲ್ಲಿ 1 ಮಿಲಿಯನ್​ ಸಸಿಗಳನ್ನ ನೆಡುವ ಮೂಲಕ ವಿಶ್ವ ದಾಖಲೆಯನ್ನ ನಿರ್ಮಿಸಿದೆ.

ಕೆಲಸಗಾರರ ಈ ಕಾರ್ಯವನ್ನ ಮೆಚ್ಚಿದ ವಂಡರ್​ ಬುಕ್​ ಆಫ್​ ರೆಕಾರ್ಡ್​ ಕೆಲಸಗಾರರಿಗೆ ಹಾಗೂ ಕಾರ್ಯಕ್ರಮ ಸಂಘಟಕರಿಗೆ ಮೆಚ್ಚುಗೆ ಪತ್ರವನ್ನ ರವಾನಿಸಿದೆ. ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕ ಜೋಗು ರಾಮಣ್ಣ ತಮ್ಮ 58ನೇ ಹುಟ್ಟು ಹಬ್ಬದ ಅಂಗವಾಗಿ ರಿಮ್ಸ್ ಆಸ್ಪತ್ರೆಗೆ 2 ಆಂಬುಲೆನ್ಸ್​ಗಳನ್ನ ಕೊಡುಗೆಯಾಗಿ ನೀಡಿದ್ರು.

200 ಎಕರೆ ಜಾಗದಲ್ಲಿ ಮಿಯಾವಕಿ ಮಾದರಿಯಲ್ಲಿ ಸುಮಾರು 5 ಲಕ್ಷ ಸಸಿಗಳನ್ನ ನೆಡಲಾಗಿದೆ. ಕಾರ್ಯಕ್ರಮದ ವೇಳೆ ಈ ಭೂಮಿಯನ್ನ 10 ವಿಭಾಗವಾಗಿ ವಿಂಗಡಿಸಲಾಯ್ತು. ಈ ಕಾರ್ಯಕ್ರಮದಲ್ಲಿ ಸ್ಥಳೀಯರು, 30 ಸಾವಿರಕ್ಕೂ ಅಧಿಕ ಟಿಆರ್​ಎಸ್​ ಸದಸ್ಯರು, ಅರಣ್ಯ ಹಾಗೂ ಪರಿಸರ ಇಲಾಖೆ ಸಚಿವ ಎ. ಇಂದ್ರಾ ಕಿರಣ್​ ರೆಡ್ಡಿ ಭಾಗಿಯಾಗಿದ್ದರು.

2019ರಲ್ಲಿ ಟರ್ಕಿ 1 ಗಂಟೆ ಅವಧಿಯಲ್ಲಿ 3.03 ಲಕ್ಷ ಗಿಡಗಳನ್ನ ನೆಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...