alex Certify ತೆಲಂಗಾಣದಲ್ಲಿ ಹೊಸ ವಿವಾದ: ಹಿಂದೂಗಳಿಗೆ ಮಂಗಳ ಸೂತ್ರ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ; ಬುರ್ಖಾ ಧರಿಸಿದ್ದ ಮಹಿಳೆಯರಿಗೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆಲಂಗಾಣದಲ್ಲಿ ಹೊಸ ವಿವಾದ: ಹಿಂದೂಗಳಿಗೆ ಮಂಗಳ ಸೂತ್ರ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ; ಬುರ್ಖಾ ಧರಿಸಿದ್ದ ಮಹಿಳೆಯರಿಗೆ ಅವಕಾಶ

ಕರ್ನಾಟಕದಲ್ಲಿ ಹಿಜಾಬ್ ಕುರಿತ ವಿವಾದ ಈ ಹಿಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಬ್ಬರು ನ್ಯಾಯಾಧೀಶರು ವಿಭಿನ್ನ ತೀರ್ಪು ನೀಡಿದ ಬಳಿಕ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳ ಅಂಗಳಕ್ಕೆ ಹೋಗಿದೆ. ಇದರ ಮಧ್ಯೆ ತೆಲಂಗಾಣದ ಪರೀಕ್ಷಾ ಕೇಂದ್ರವೊಂದರಲ್ಲಿ ನಡೆದ ಘಟನೆ ಈಗ ವಿವಾದಕ್ಕೆ ಕಾರಣವಾಗಿದೆ.

ಅಕ್ಟೋಬರ್ 16ರ ಭಾನುವಾರದಂದು ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ ಗ್ರೂಪ್ 1 ಪೂರ್ವಭಾವಿ ಪರೀಕ್ಷೆ ನಡೆಸಿದ್ದು, ಅದಿಲಾಬಾದ್ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಹಿಂದೂ ಮಹಿಳೆಯರಿಗೆ ಕಿವಿಯೋಲೆ, ಬಳೆ, ಮಾತ್ರವಲ್ಲದೆ ಮಂಗಳಸೂತ್ರ ಕೂಡ ತೆಗೆದು ಪರೀಕ್ಷಾ ಕೇಂದ್ರ ಪ್ರವೇಶಿಸಲು ಸೂಚಿಸಲಾಗಿದೆ.

ಆದರೆ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸಿಕೊಂಡು ಬಂದರೂ ಅವರಿಗೆ ಅವಕಾಶ ನೀಡಲಾಗಿದೆ ಎಂದು ದೂರಲಾಗಿದ್ದು, ಇದರ ವಿಡಿಯೋವನ್ನು ಬಿಜೆಪಿ ನಾಯಕಿ ಪ್ರೀತಿಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ತೆಲಂಗಾಣ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ತೆಲಂಗಾಣ ರಾಷ್ಟ್ರ ಸಮಿತಿ ವಕ್ತಾರರು, ಬುರ್ಖಾ ಧರಿಸಿದ ಮಹಿಳೆಯರಿಗೂ ಸಂಪೂರ್ಣ ತಪಾಸಣೆ ನಡೆಸಿಯೇ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗಿದೆ ಎಂದಿದ್ದಾರೆ. ಅಲ್ಲದೆ ಅವರು ಈ ಕುರಿತ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಬಿಜೆಪಿ ಪ್ರಚಾರ ರಾಜಕೀಯ ಮಾಡುವ ಮೂಲಕ ಕೋಮು ಶಾಂತಿಯನ್ನು ಕದಡುತ್ತಿದೆ ಎಂದು ಟಿ ಆರ್ ಎಸ್ ನಾಯಕರು ಟೀಕಿಸಿದ್ದಾರೆ.

ಇದರ ಮಧ್ಯೆ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಅದಿಲಾಬಾದ್ ಪೊಲೀಸ್ ಅಧೀಕ್ಷಕ ಉದಯ್ ಕುಮಾರ್ ರೆಡ್ಡಿ, ಪರೀಕ್ಷಾ ಕೇಂದ್ರದ ಸಿಬ್ಬಂದಿ ತಪ್ಪಿನಿಂದಾಗಿ ಮೊದಲಿಗೆ ಮಂಗಳಸೂತ್ರ ತೆಗೆಯುವಂತೆ ಕೇಳಲಾಗಿತ್ತು. ಆದರೆ ತಕ್ಷಣವೇ ಇದನ್ನು ಸರಿಪಡಿಸಲಾಗಿದೆ. ಮಂಗಳಸೂತ್ರ ಧರಿಸಿಯೇ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...