alex Certify ಪ್ರಧಾನಿ ಮೋದಿ ಹಾರಾಡಿದ ‘ತೇಜಸ್’ ವಿಮಾನ ಪತನವಾಗ್ಬಹುದು : ವಿವಾದಾತ್ಮಕ ಹೇಳಿಕೆ ನೀಡಿದ ‘TMC’ ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಹಾರಾಡಿದ ‘ತೇಜಸ್’ ವಿಮಾನ ಪತನವಾಗ್ಬಹುದು : ವಿವಾದಾತ್ಮಕ ಹೇಳಿಕೆ ನೀಡಿದ ‘TMC’ ನಾಯಕ

ಪ್ರಧಾನಿ ಮೋದಿ ಹಾರಾಡಿದ   ತೇಜಸ್  ವಿಮಾನ ಪತನವಾಗ್ಬಹುದು ಎಂದು ಟಿಎಂಸಿ ನಾಯಕ ಶಂತನು ಸೇನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ಅಪಶಕುನ ಎಂಬ ವಿಪಕ್ಷ ನಾಯಕರ ಟೀಕೆಗಳು ಮುಂದುವರೆದಿದ್ದು, ರಾಹುಲ್ ಗಾಂಧಿ ಬಳಿಕ ಮತ್ತೊಬ್ಬ ನಾಯಕ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ಮೋದಿಗೆ ಅಪಕುಶನ ತಾಗಿದೆ. ಅವರು ತೆರಳಿದ ಕಡೆಯೆಲ್ಲಾ ಅಪಜಯ ಉಂಟಾಗುತ್ತಿದೆ. ಅದೇ ರೀತಿ ಶನಿವಾರ ಬೆಂಗಳೂರಿನಲ್ಲಿ ತೇಜಸ್ ಯುದ್ದ ವಿಮಾನದ ಪರೀಕ್ಷೆಗೆ ತೆರಳಿ ಹಾರಾಟ ಮಾಡಿದ್ದಾರೆ. ಹಾಗಾಗಿ ಯುದ್ದ ವಿಮಾನ ಪತನವಾದರೂ ಅಚ್ಚರಿಯಿಲ್ಲ ಎಂದರು.ಪ್ರಧಾನಿ ಮೋದಿ ವಿಶ್ವಕಪ್ ವೀಕ್ಷಿಸಿದ್ದರಿಂದಲೇ ಭಾರತ ಸೋತಿತ್ತು ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಟಿಎಂಸಿ ನಾಯಕ ಹೇಳಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...