alex Certify ವಿವಿಐಪಿ ಪ್ರದೇಶಗಳಲ್ಲಿನ ಶಾಲೆಗಳ ಶಿಕ್ಷಕರಿಗೆ ಟ್ರಾಫಿಕ್​ ನಿರ್ವಹಣೆ ಹೊಣೆ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಿಐಪಿ ಪ್ರದೇಶಗಳಲ್ಲಿನ ಶಾಲೆಗಳ ಶಿಕ್ಷಕರಿಗೆ ಟ್ರಾಫಿಕ್​ ನಿರ್ವಹಣೆ ಹೊಣೆ !

ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ ಬಿಡುವ ವೇಳೆ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಸಹಜ. ಕೆಲ ನಿಮಿಷಗಳು ಸಾರ್ವಜನಿಕ ವಾಹನ ಸಂಚಾರ, ಮಕ್ಕಳ ಅಡ್ಡಾದಿಡ್ಡಿ ಓಡಾಟ ಎಲ್ಲವೂ ಅಯೋಮಯವಾಗಿರುತ್ತದೆ.

ಇದೀಗ ಲಕ್ನೋದಲ್ಲಿ ಪೊಲೀಸರು ಇಂತಹ ಸಂದರ್ಭದಲ್ಲಿ ಟ್ರಾಫಿಕ್​ ನಿರ್ವಹಿಸಲು ಮತ್ತು ಶಾಲೆಗಳು ಮುಗಿದ ನಂತರ ಗೊತ್ತುಪಡಿಸಿದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವುದಕ್ಕೆ ಹೊಸ ಸೂತ್ರ ಕಂಡಿಕೊಂಡಿದ್ದಾರೆ.

ಅಲ್ಲಿ ಶಾಲೆಗಳ ಹೊರಗೆ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಸೆಕ್ಯುರಿಟಿ ನಿಯೋಜಿಸಲು ಸಲಹೆ ನೀಡಿದ್ದು, ಕೆಲವು ಪ್ರಮುಖ ಶಾಲೆಗಳು ವಿಧಾನ ಭವನ ಸೇರಿದಂತೆ ವಿವಿಐಪಿ ಸ್ಥಾಪನೆಗಳ ಸಮೀಪದಲ್ಲಿ ನೆಲೆಗೊಂಡಿರುವುದರಿಂದ ಸಲಹೆಯ ಇದರ ಅಗತ್ಯವು ಉದ್ಭವಿಸಿದೆ.

ಮಕ್ಕಳನ್ನು ಕರೆದುಕೊಂಡು ಹೋಗಲು ಮತ್ತು ಬಿಡಲು ಬರುವ ಪೋಷಕರಿಗೂ ಸಹ ಸೂಕ್ತ ನಿರ್ದೇಶನ ಮತ್ತು ಮಾರ್ಗದರ್ಶನ ಮಾಡಲು ಶಾಲಾ ಗೇಟ್​ಗಳ ಹೊರಗೆ ಮಾರ್ಷಲ್​ಗಳನ್ನು ನಿಯೋಜಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ಪ್ರತಿದಿನ ಶಾಲೆಗಳು ಪ್ರಾರಂಭವಾದಾಗ ಅಥವಾ ಕೊನೆಗೊಂಡಾಗ ಗೇಟ್​ಗಳ ಹೊರಗೆ ವಾಹನಗಳ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಶಿಕ್ಷಕರು ಅಥವಾ ಆಡಳಿತ ಸಿಬ್ಬಂದಿಯನ್ನು ನಿಯೋಜಿಸಬೇಕು. “ವಾಹನಗಳನ್ನು ನಿಲುಗಡೆ ಮಾಡಬೇಕಾದಲ್ಲಿ ಮೊದಲೇ ಗೊತ್ತುಪಡಿಸಿದ ಪಾರ್ಕಿಂಗ್ ಸ್ಲಾಟ್​ ಅನ್ನು ಗುರುತಿಸಬೇಕು” ಎಂದು ಹೇಳಲಾಗಿದೆ.

ಇಡೀ ಶಾಲೆಯನ್ನು ಒಂದೇ ಸಮಯದಲ್ಲಿ ಕೊನೆಗೊಳಿಸಬಾರದು. ವಿವಿಧ ತರಗತಿಗಳನ್ನು 20 ನಿಮಿಷಗಳ ಅಂತರದಲ್ಲಿ ಮುಗಿಸಿ ಮಕ್ಕಳು ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿರುವುದಾಗಿ ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...