alex Certify SHOCKING: ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕಿ: ಫುಲ್ ಟೈಟಾಗಿ ಪಾಠ ಮಾಡ್ತಿದ್ದ ಶಿಕ್ಷಕಿ ಸೇರಿ ಇಬ್ಬರು ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕಿ: ಫುಲ್ ಟೈಟಾಗಿ ಪಾಠ ಮಾಡ್ತಿದ್ದ ಶಿಕ್ಷಕಿ ಸೇರಿ ಇಬ್ಬರು ಸಸ್ಪೆಂಡ್

ತುಮಕೂರು: ತುಮಕೂರು ಜಿಲ್ಲೆಯ ಗಳಿಗೇನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಚಿಕ್ಕಸಾರಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಲೆಯಲ್ಲಿಯೇ ಮದ್ಯ ಸೇವಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಇದೇ ಶಾಲೆಯ ಮತ್ತೊಬ್ಬ ಶಿಕ್ಷಕಿಯನ್ನು ಕೂಡ ಅಮಾನತು ಮಾಡಲಾಗಿದೆ.

ಇಬ್ಬರು ಶಿಕ್ಷಕಿಯರ ನಡುವೆ ಹೊಂದಾಣಿಕೆ ಇರಲಿಲ್ಲ. ಪದೇಪದೇ ಜಗಳ ಮಾಡಿಕೊಳ್ಳುತ್ತಿದ್ದು, ಮಕ್ಕಳಿಗೆ ಸರಿಯಾಗಿ ಪಾಠ ಕೂಡ ಮಾಡುತ್ತಿರಲಿಲ್ಲ. ಇದನ್ನು ಗಮನಿಸಿದ ಗ್ರಾಮಸ್ಥರು ತಿಳಿಹೇಳಿದರೂ ಕೂಡ ಕೇಳಿರಲಿಲ್ಲ. ಕೊನೆಗೆ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿದಾಗ ಶಿಕ್ಷಕಿ ಶಾಲೆಯಲ್ಲಿಯೇ ಮದ್ಯ ಸೇವಿಸುತ್ತಾರೆ ಎನ್ನುವುದು ಗೊತ್ತಾಗಿದೆ. ಅಲ್ಲದೆ, ಗ್ರಾಮಸ್ಥರು ನೀಡಿದ ದೂರು ಆಧರಿಸಿ ಪರಿಶೀಲನೆಗೆ ಬಂದ ಅಧಿಕಾರಿಗಳು ಶಿಕ್ಷಕೀಯ ಟೇಬಲ್ ತೆರೆದು ನೋಡಿದಾಗ ಅದರಲ್ಲಿ ಮದ್ಯದ ಬಾಟಲ್ ಪತ್ತೆಯಾಗಿವೆ. ವಿಚಾರಣೆ ಕಾಯ್ದಿರಿಸಿ ಇಬ್ಬರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...