alex Certify ತನ್ನ ಚಿತ್ರವನ್ನು ಬಿಡಿಸುವಂತೆ ಶಿಕ್ಷಕಿಯಿಂದ 1ನೇ ತರಗತಿ ಮಕ್ಕಳಿಗೆ ಟಾಸ್ಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಚಿತ್ರವನ್ನು ಬಿಡಿಸುವಂತೆ ಶಿಕ್ಷಕಿಯಿಂದ 1ನೇ ತರಗತಿ ಮಕ್ಕಳಿಗೆ ಟಾಸ್ಕ್​

ಒಂದನೇ ತರಗತಿ ಶಿಕ್ಷಕಿಯೊಬ್ಬರು ಒಂದನೇ ತರಗತಿ ಮಕ್ಕಳಿಗೆ ವಿಶೇಷ ಟಾಸ್ಕ್​ ನೀಡಿದ್ದು, ಅದರ ಫಲಿತಾಂಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಹಜವಾಗಿ ಪುಟ್ಟ ಮಕ್ಕಳ ಕಲ್ಪನೆ ನೆಟ್ಟಿಗರ ಹೃದಯ ತಟ್ಟಿದೆ.

ಆ ಶಿಕ್ಷಕಿ ಹೆಸರು ನಿಶಾತ್​. ಆಕೆ ತನ್ನ ಚಿತ್ರವನ್ನು ಬಿಡಿಸಲು ವಿದ್ಯಾರ್ಥಿಗಳನ್ನು ಕೇಳಿದರು. ಬಳಿಕ ಮಕ್ಕಳು ಬಿಡಿಸಿದ ಚಿತ್ರವನ್ನು ಮೈಕ್ರೋಬ್ಲಾಗಿಂಗ್​ ಸೈಟ್​ನ ಥ್ರೆಡ್​ನಲ್ಲಿ ಹಂಚಿಕೊಂಡಿದ್ದಾರೆ.

ಥ್ರೆಡ್​ನಲ್ಲಿ ತನ್ನ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ನಿಶಾತ್​, ಸಹಜವಾಗಿ, ಭಾವಚಿತ್ರಗಳನ್ನು ಉಲ್ಲಾಸಮಯ ಕಾಮೆಂಟ್​ಗಳೊಂದಿಗೆ ಹಂಚಿಕೊಂಡಿದ್ದಾರೆ.

ನನ್ನ ಚಿತ್ರ ಬಿಡಿಸಲು ವಿದ್ಯಾರ್ಥಿಗಳನ್ನು ಕೇಳಿದೆ. ಫಲಿತಾಂಶಗಳು ಉಲ್ಲಾಸದಾಯಕವಾಗಿವೆ. ನಾನು ಹೇಗೆ ಕಾಣುತ್ತಿದ್ದೇನೆ ಎಂಬುದರ‌ ಚಿತ್ರ ಇಲ್ಲಿದೆ ಎಂದು ನಿಶಾತ್​ ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ.

ನಾನು ಈ ಥ್ರೆಡ್​ ಅನ್ನು ಪ್ರೀತಿಸುತ್ತೇನೆ! ತುಂಬಾ ಮುದ್ದಾಗಿದೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ, ಕಲೆ ತುಣುಕುಗಳು ನಿಜಕ್ಕೂ. ತುಂಬಾ ಮುದ್ದಾಗಿದೆ ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...