alex Certify ರೈಲಿನಲ್ಲಿ ಚಹಾ ಸೇವಿಸುವವರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಚಹಾ ಸೇವಿಸುವವರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ…!

ಪ್ರತಿನಿತ್ಯ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅವರು ಶಾಕ್​ ಆಗುವಂಥ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಕೆಲವು ರೈಲಿನಲ್ಲಿ ಚಹ ತಯಾರಿಸುವ ಜಾಗ, ಅವರು ಬಳಸುವ ನೀರಿನ ಬಗ್ಗೆ ಇದಾಗಲೇ ಕೆಲವು ವಿಡಿಯೋಗಳು ಬಂದಿದ್ದರೂ ಈಗ ವಿಭಿನ್ನ ರೀತಿಯ ವಿಡಿಯೋ ಒಂದು ವೈರಲ್​ ಆಗಿದೆ.

ರೈಲಿನಲ್ಲಿ ಅಶುದ್ಧ ನೀರಿಗೆ ಅಶುಚಿ ಕಬ್ಬಿಣದ ರಾಡ್ ಬಳಸಿ ವ್ಯಕ್ತಿಯೊಬ್ಬ ಟೀ ಬಿಸಿ ಮಾಡುತ್ತಿರುವ ವಿಡಿಯೋ ಇದಾಗಿದೆ. ನೀರು ಕುದಿಸಲು ಅಶುಚಿಯಾದ ಕಬ್ಬಿಣದ ರಾಡ್ ಬಳಸಿ ಟೀ ಮಾಡುತ್ತಿರುವ ಇಬ್ಬರು ವ್ಯಕ್ತಿಗಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿದೆ.

ರೈಲು ಶಬರಿ ಎಕ್ಸ್‌ಪ್ರೆಸ್ ಎಂದು ಶೀರ್ಷಿಕೆ ನಿಡಲಾಗಿದೆ. ವಿಡಿಯೋ ರೆಕಾರ್ಡ್ ಮಾಡುತ್ತಿರುವ ಪ್ರಯಾಣಿಕರು ಭಾರತೀಯ ರೈಲ್ವೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋ ಇದುವರೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ರೈಲಿನಲ್ಲಿ ಮಾರಾಟಗಾರರು ಅಶುಚಿಯಾದ ಅಭ್ಯಾಸಗಳನ್ನು ಅನುಸರಿಸುವುದನ್ನು ನೋಡುತ್ತಿರುವುದು ಇದೇ ಮೊದಲಲ್ಲ ಎಂದು ಹಲವರು ಹೇಳಿದ್ದಾರೆ. ಆಹಾರಗಳನ್ನು ಪಾರ್ಸೆಲ್​ ಮಾಡುವ ವಿಧಾನದ ಬಗ್ಗೆಯೂ ಕಮೆಂಟ್​ನಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...