ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಾಯಕ ಕೆ. ಪಟ್ಟಾಭಿ ರಾಮ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯವಾಡದ ಗವರ್ನರ್‌ಪೇಟ್ ಪೊಲೀಸ್ ಠಾಣೆಯಲ್ಲಿ ನೀಡಲಾದ ದೂರಿನ ಅನ್ವಯ ಪಟ್ಟಾಭಿರಾಮ್‌ರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಐಪಿಸಿಯ 153ಎ (ಶತ್ರುತ್ವ ಹರಡುವುದು), 505 (ಸಾರ್ವಜನಿಕವಾಗಿ ಗಲಾಟೆ ಮಾಡುವುದು), 353 (ನಾಗರಿಕ ಸೇವಕರಿಗೆ ಕರ್ತವ್ಯ ಮಾಡಲು ಅಡ್ಡಿ ಪಡಿಸುವುದು), 504 (ಶಾಂತಿ ಕದಡುವುದು) ಹಾಗೂ 120ಬಿ (ಕ್ರಿಮಿನಲ್ ಸಂಚು) ವಿಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾರಾಟಕ್ಕಿಟ್ಟ ಫ್ಲಾಟ್ ನಲ್ಲಿ ಎಲ್ಲಿದೆ ಅಡುಗೆ ಮನೆ ಎಂದು ಜನ ಕನ್ಫ್ಯೂಸ್…!
ಮಾಧ್ಯಮಗಳಿಗೆ ವಿಡಿಯೋ ಬಿಡುಗಡೆ ಮಾಡಿದ ಟಿಡಿಪಿ ನಾಯಕ, ಪೊಲೀಸರು ತಮ್ಮನ್ನು ಬಂಧಿಸುವ ಮುನ್ನ ತಮ್ಮ ಮೇಲೆ ಯಾವುದೇ ಗಾಯಗಳಿರಲಿಲ್ಲ ಎಂದಿದ್ದು, ಪೊಲೀಸ್ ಕಸ್ಟಡಿಯಲ್ಲಿ ತಮ್ಮ ಪ್ರಾಣಕ್ಕೆ ಹೆಚ್ಚು ಕಮ್ಮಿ ಆದರೆ ಅದಕ್ಕೆ ಪೊಲೀಸರೇ ಹೊಣೆ ಎಂದಿದ್ದಾರೆ.
ಪಟ್ಟಾಭಿರಾಮ್‌ರ ಹೇಳಿಕೆಗಳಿಂದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರೊಚ್ಚಿಗೆದ್ದು ಅಮರಾವತಿಯ ಮಂಗಳಗಿರಿಯಲ್ಲಿರುವ ಟಿಡಿಪಿಯ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಇದೇ ವೇಳೆ ಪಟ್ಟಾಭಿರಾಮ್‌ರ ಮನೆಯ ಮೇಲೂ ದಾಳಿಯಾಗಿದೆ.
ಥೇಟ್ ಮೈಕಲ್ ಜಾಕ್ಸನ್ ರಂತೆ ನರ್ತಿಸಿದ ಬಾತುಕೋಳಿ..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು
ಟಿಡಿಪಿ ಮಹಾ ಕಾರ್ಯದರ್ಶಿ ಹಾಗೂ ಮೇಲ್ಮನೆ ಸದಸ್ಯ ನಾರಾ ಲೋಕೇಶ್ ವಿರುದ್ಧ ಎಸ್‌ಸಿ ಎಸ್‌ಟಿ ಕಾಯಿದೆ ಅಡಿ ದೂರು ದಾಖಲಿಸಲಾಗಿದೆ. ಎಂಎಲ್‌ಸಿ ಅಶೋಕ್ ಬಾಬು ಹಾಗೂ ಇತರರೊಂದಿಗೆ ಲೋಕೇಶ್‌ರನ್ನು ಬಂಧಿಸಲಾಗಿದೆ.
ಆಂಧ್ರ ಪ್ರದೇಶದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ವಿಚಾರವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಲು ಕೋರಿದ್ದಾರೆ.