alex Certify ಮಾರಾಟಕ್ಕಿಟ್ಟ ಫ್ಲಾಟ್‍ ನಲ್ಲಿ ಎಲ್ಲಿದೆ ಅಡುಗೆ ಮನೆ ಎಂದು ಜನ ಕನ್ಫ್ಯೂಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರಾಟಕ್ಕಿಟ್ಟ ಫ್ಲಾಟ್‍ ನಲ್ಲಿ ಎಲ್ಲಿದೆ ಅಡುಗೆ ಮನೆ ಎಂದು ಜನ ಕನ್ಫ್ಯೂಸ್…!

ಲಂಡನ್‌ನ ಚೆಲ್ಸಿಯಾದಲ್ಲಿರುವ ಫ್ಲಾಟ್ ಒಂದನ್ನು ಮಾರಾಟಕ್ಕಿಡಲಾಗಿದೆ. ಆದರೆ, ಈ ಫ್ಲಾಟ್ ನಲ್ಲಿ ಅಡುಗೆ ಕೋಣೆ ಎಲ್ಲಿದೆ ಎಂದು ಜನರು ತಲೆಕೆರೆದುಕೊಳ್ಳುತ್ತಿದ್ದಾರೆ. ನೀವಾದ್ರೂ ಗಮನಿಸಬಹುದೇ ಅಡುಗೆ ಮನೆ ಎಲ್ಲಿದೆಯೆಂದು..?

ಚೆಲ್ಸಿಯಾದಲ್ಲಿನ ಕಿಂಗ್ಸ್ ರಸ್ತೆಗೆ ಸಮೀಪದಲ್ಲಿ ಇರುವ ಅಪಾರ್ಟ್ಮೆಂಟ್ ಜನಪ್ರಿಯ ಮತ್ತು ಸುರಕ್ಷಿತವಾದ ಪೋರ್ಟರ್ ಬ್ಲಾಕ್‌ನಲ್ಲಿ ಸೊಗಸಾದ, ಸಂಪೂರ್ಣ ಸುಸಜ್ಜಿತ ಸೌಕರ್ಯಗಳನ್ನು ಒದಗಿಸುತ್ತದೆ. ಫೋಟೋದಲ್ಲಿ ನೋಡುವಾಗ ಮನೆ ತುಂಬೆಲ್ಲಾ ಪುಸ್ತಕದ ಭಂಡಾರವೇ ಇರುವಂತೆ ಕಾಣುತ್ತದೆ.

ಆದರೆ, ನೀವೇನಾದ್ರೂ ಕಪಾಟಿನಲ್ಲಿ ಇರಿಸಲಾಗಿರುವ ಪುಸ್ತಕಗಳನ್ನು ತೆಗೆದುಕೊಳ್ಳಲು ಹೋದ್ರೆ ಖಂಡಿತಾ ಶಾಕ್ ಆಗುತ್ತೀರಿ..! ಯಾಕಂದ್ರೆ ಅಲ್ಲಿ ಪುಸ್ತಕವನ್ನು ಜೋಡಿಸಲಾಗಿಲ್ಲ ಬದಲಾಗಿ ಅಡುಗೆಮನೆಯನ್ನು ಮರೆಮಾಚಲು ಪುಸ್ತಕದ ಕಪಾಟಿನಂತೆ ವಿನ್ಯಾಸಗೊಳಿಸಲಾಗಿದೆ.

ಅಪಾರ್ಟ್ಮೆಂಟ್ ಒಂದು ನಯವಾದ ತೆರೆದ ಪ್ಲಾನ್ ಅಡುಗೆಮನೆಯೊಂದಿಗೆ ದೊಡ್ಡ ಸ್ವಾಗತ ಕೊಠಡಿಯನ್ನು ಒಳಗೊಂಡಿದೆ. ಜಾಣತನದಿಂದ ಅಡುಗೆ ಮನೆಯನ್ನು ಮರೆಮಾಡುವಂತಹ ವಿನ್ಯಾಸ ನಿರ್ಮಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...