alex Certify ಬಳಸಿದ ಒಳ ಉಡುಪು ಮಾರಾಟ ಮಾಡಿ ಈಕೆ ಗಳಿಸ್ತಾಳೆ ಲಕ್ಷಾಂತರ ರೂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಸಿದ ಒಳ ಉಡುಪು ಮಾರಾಟ ಮಾಡಿ ಈಕೆ ಗಳಿಸ್ತಾಳೆ ಲಕ್ಷಾಂತರ ರೂ…!

selling used underwear online4

ಸಾಮಾನ್ಯವಾಗಿ ಬೇರೆಯವರು ಧರಿಸಿದ ಉಡುಪು ಎಲ್ಲರಿಗೂ ಇಷ್ಟವಾಗೋದು ಸಹಜ. ಅದೇ ಡಿಸೈನ್ ಡ್ರೆಸ್ ಬೇಕೆಂದು ಅನೇಕರು ಬಯಸ್ತಾರೆ. ಆದ್ರೆ ಅದೇ ವಿನ್ಯಾಸದ ಡ್ರೆಸ್ ಸಿಗುವುದು ಕಷ್ಟ. ಆದ್ರೆ ಜನರ ಆಸೆ ತೀರಿಸುವ ಮೂಲಕ ಬ್ರಿಟಿಷ್ ಮಹಿಳೆಯೊಬ್ಬಳು ತಿಂಗಳಿಗೆ 4 ಲಕ್ಷಕ್ಕೂ ಹೆಚ್ಚು ಹಣ ಸಂಪಾದನೆ ಮಾಡ್ತಿದ್ದಾಳೆ.

ಯಸ್, ಬ್ರಿಟಿಷ್ ಮಹಿಳೆ ಟಟಿಯಾನಾ ಬೀ ತನ್ನ ಹಳೆಯ ಬಟ್ಟೆಗಳನ್ನು ಮಾರಿ ಲಕ್ಷ ರೂಪಾಯಿ ಸಂಪಾದಿಸುತ್ತಾಳೆ. ಹಳೆಯ ಬಟ್ಟೆಗಳನ್ನು ಮಾರಾಟ ಮಾಡುವ ಮೂಲಕ  ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿಗಳನ್ನು ಸಂಪಾದಿಸುತ್ತಾಳೆ. ಇದನ್ನು ಸೈಡ್ ಬ್ಯುಸಿನೆಸ್ ಮಾಡಿಕೊಂಡಿದ್ದಾಳೆ ಟಟಿಯಾನಾ. ವಿಶೇಷವೆಂದರೆ ಅವಳ ಗಳಿಕೆಯ ಬಹುಪಾಲು ಸೊಗಸಾದ ಒಳ ಉಡುಪುಗಳ  ಮಾರಾಟದಿಂದ ಬರ್ತಿದೆ.

ಟಟಿಯಾನಾ ಬೀ ತಮ್ಮ 22 ನೇ ವಯಸ್ಸಿನಲ್ಲಿ ಈ ಕೆಲಸವನ್ನು ಪ್ರಾರಂಭಿಸಿದ್ದಾಳೆ. ಹೊಸ ಆಲೋಚನೆ ಮಾಡ್ತಿದ್ದ ಟಟಿಯಾನಾ ಈ ಪ್ಲಾನ್ ಕ್ಲಿಕ್ ಆಯ್ತಂತೆ. ಕಾಲೇಜಿಗೆ ಹೋಗುವ ವೇಳೆ ಹಣದ ಅಗತ್ಯತೆ ಇತ್ತಂತೆ. ಸ್ನೇಹಿತರು ಹಳೆ ಬಟ್ಟೆ ಮಾರಾಟದ ಬಗ್ಗೆ ಹೇಳಿದ್ದರಂತೆ. ಅದ್ರ ಬಗ್ಗೆ ಸ್ಟಡಿ ಮಾಡಿದ ಟಟಿಯಾನಾ, ಬ್ಯುಸಿನೆಸ್ ಶುರು ಮಾಡಿದ್ದಳಂತೆ. ಆರಂಭದಲ್ಲಿ ತೊಂದರೆ ಅನುಭವಿಸಿದ್ದ ಟಟಿಯಾನಾ ಒಮ್ಮೆ 7 ಸಾವಿರ ರೂಪಾಯಿ ಗಳಿಸಿದ್ದಳಂತೆ. ಆ ನಂತ್ರ ಹಿಂತಿರುಗಿ ನೋಡಲಿಲ್ಲವಂತೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...