alex Certify ಕೂದಲೆಳೆಯಲ್ಲಿ ಪದಕ ವಂಚಿತರಿಗೆ ಟಾಟಾ ಮೋಟರ್ಸ್‌ನಿಂದ ಅರ್ಥಪೂರ್ಣ ಸನ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲೆಳೆಯಲ್ಲಿ ಪದಕ ವಂಚಿತರಿಗೆ ಟಾಟಾ ಮೋಟರ್ಸ್‌ನಿಂದ ಅರ್ಥಪೂರ್ಣ ಸನ್ಮಾನ

ಇತಿಹಾಸ ಯಾವಾಗಲೂ ಗೆದ್ದವರನ್ನೇ ಸನ್ಮಾನಿಸುತ್ತದೆ. ಆದರೆ ತಮ್ಮದೆಲ್ಲವನ್ನೂ ಧಾರೆ ಎರೆದು ಶ್ರಮಪಟ್ಟರೂ ಕೂದಲೆಳೆ ಅಂತರದಲ್ಲಿ ಗೆಲುವಿನಿಂದ ವಂಚಿತರಾಗುವ ಸಾಧಕರ ಬಗ್ಗೆ ನಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇರುವುದಿಲ್ಲ.

ಎಲ್ಲರೂ ಒಲಿಂಪಿಕ್ ಚಾಂಪಿಯನ್‌ಗಳನ್ನು ಶ್ಲಾಘಿಸಿದರೆ ಟಾಟಾ ಸಮೂಹ ಇದೇ ನಿಟ್ಟಿನಲ್ಲಿ ಭಿನ್ನವಾದ ಹೆಜ್ಜೆ ಇಟ್ಟು, ಸ್ವಲ್ಪದರಲ್ಲೇ ಪದಕ ಮಿಸ್ ಮಾಡಿಕೊಂಡು ನಿರಾಸೆ ಅನುಭವಿಸಿದವರಿಗೆ ಸಮಾಧಾನ ಮಾಡಲು ಅನುಕರಣೀಯ ಹೆಜ್ಜೆಯೊಂದನ್ನು ಇಟ್ಟಿದೆ.

“ಈ ದೇಶೀ ಆಟಗಾರರ ಪರಿಶ್ರಮ ಹಾಗೂ ಬದ್ಧತೆಯನ್ನು ಗುರುತಿಸಿ, ಧನ್ಯವಾದ ಹೇಳಲು, ಟಾಟಾ ಮೋಟರ್ಸ್ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಅನ್ನು, ’ಹೈ ಸ್ಟ್ರೀಟ್‌ ಗೋಲ್ಡ್‌ ಕಲರ್‌ಪ್ಯಾಚ್‌’ ಬಣ್ಣದಲ್ಲಿ ಈ ಆಟಗಾರರಿಗೆ ಶೀಘ್ರವೇ ತಲುಪಿಸಲಿದೆ,” ಎಂದು ಟಾಟಾ ಮೋಟರ್ಸ್‌ನ ಪ್ರಕಟಣೆ ತಿಳಿಸಿದೆ.

ಪ್ರತಿದಿನ 34 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿ ಅವಧಿಗೆ 18 ಲಕ್ಷ ನಿಮ್ಮದಾಗಿಸಿಕೊಳ್ಳಿ

“ಜಗತ್ತಿನ ಸರ್ವಶ್ರೇಷ್ಢರ ವಿರುದ್ಧ ಸೆಣಸಿ, ಅಂಥ ಒತ್ತಡದಲ್ಲೂ ತಮ್ಮ ಶ್ರೇಷ್ಠ ಪ್ರದರ್ಶನ ತೋರಿ ಪೋಡಿಯಂ ಫಿನಿಶ್‌ಗೆ ಸನಿಹ ಬಂದವರ ಸಾಧನೆಯನ್ನು ಆಚರಿಸಲು ನಮಗೆ ಸಂತಸವಾಗುತ್ತದೆ,” ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನ ವಿಭಾಗದ ಮುಖ್ಯಸ್ಥ ಶೈಲೇಶ್ ಚಂದ್ರ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...