alex Certify ಟಾಟಾ ಮೋಟಾರ್ಸ್ ನ ʼಕರ್ವ್ʼ ಬಗ್ಗೆ ನಿಮಗೆಷ್ಟು ಗೊತ್ತು…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಟಾ ಮೋಟಾರ್ಸ್ ನ ʼಕರ್ವ್ʼ ಬಗ್ಗೆ ನಿಮಗೆಷ್ಟು ಗೊತ್ತು…? ಇಲ್ಲಿದೆ ಮಾಹಿತಿ

ಟಾಟಾ ಮೋಟಾರ್ಸ್ ಟಾಟಾ ಕರ್ವ್ ಎಲೆಕ್ಟ್ರಿಕ್ ಎಸ್‌ಯುವಿ ಎಂಬ ಕೂಪ್ ಶೈಲಿಯ ವಾಹನ ಪರಿಚಯಿಸಿದೆ‌. ಇದು ಟಾಟಾ ಸಿಯೆರಾ ಇವಿ ಪರಿಕಲ್ಪನೆಯ ಮುಂದುವರಿದ ಭಾಗವಾಗಿದ್ದು, ಆಟೋ ಎಕ್ಸ್‌ಪೋದಲ್ಲಿ ತನ್ನ ಕಲ್ಪನೆಯನ್ನು ಪ್ರದರ್ಶಿಸಲಾಗಿದೆ. ಕಂಪನಿಯು ಹೊಸ ಕರ್ವ್‌ವನ್ನು ಮಧ್ಯಮ ಗಾತ್ರದ ಎಸ್‌ಯುವಿಗಿಂತ ಮೇಲೆ ಮತ್ತು ಪ್ರೀಮಿಯಂ ಎಸ್‌ಯುವಿ ವಿಭಾಗದ ಕೆಳಗೆ ಗುರುತಿಸಲಾಗಿದೆ.

ದೇವಸ್ಥಾನದ ಎದುರೇ ಸುಟ್ಟು ಕರಕಲಾಯ್ತು ಪೂಜೆ ಮಾಡಿಸಲು ತಂದಿದ್ದ ಹೊಸ ರಾಯಲ್‌ ಎನ್‌ ಫೀಲ್ಡ್‌ ಬೈಕ್‌

ಈ ವಾಹನದ ಬಗ್ಗೆ ಮಾಹಿತಿ ನೀಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ, ಎರಡು ವರ್ಷಗಳ ನಂತರ ಈ ಪರಿಕಲ್ಪನೆಯ ವಾಹನ ಸಿಗಬಹುದು ಎಂದಿದ್ದಾರೆ‌.

ಕರ್ವ್ ಪರಿಕಲ್ಪನೆಯೊಂದಿಗೆ ನಾವು ಇವಿ 2 ಜನರೇಷನ್ ಅನ್ನು ಪ್ರವೇಶಿಸುತ್ತೇವೆ, ಇದು ಪ್ರಸ್ತುತ ಅಡೆತಡೆಗಳನ್ನು ನಿವಾರಿಸುವ ಮತ್ತು ಭಾರತದಲ್ಲಿ ಇವಿಗಳ ಅಳವಡಿಕೆಯನ್ನು ಇನ್ನಷ್ಟು ಉತ್ತೇಜಿಸಲಿದೆ ಎಂದು ಹೇಳಿದರು.

– ಟಾಟಾ ಕರ್ವ್‌ನ ಪ್ರಮುಖ ಅಂಶವೆಂದರೆ ಅದರ ಕೂಪ್ ಬಾಡಿ ವಿನ್ಯಾಸ. ಬಿಡುಗಡೆಯಾದ ಚಿತ್ರಗಳು ಸೊಬಗು, ಕಾರ್ಯಕ್ಷಮತೆ ಮತ್ತು ಸಮತೋಲನವನ್ನು ತೋರಿಸಿದೆ.

– ಹಿಂಭಾಗ ಸುತ್ತುವರೆದಿರುವ ಸಿಗ್ನೇಚರ್ ಎಲ್ಇಡಿ ದೀಪಗಳು ಒಂದು ವಿಶಿಷ್ಟ ಲಕ್ಷಣವಾಗಿದೆ ಮತ್ತು ಹೈಟೆಕ್ ಭಾವನೆ ತರಲಿದೆ.

– ಮುಂಭಾಗದ ಕೆಳಗಿನ ಬಂಪರ್ ಗ್ರೂವ್ಡ್ ಪ್ಯಾಟರ್ನ್ ಹೊಂದಿದ್ದರೆ ಡೇ ಲೈಟ್ ಓಪನಿಂಗ್ ವಿಶಿಷ್ಟವಾದ ಅನುಭವ ನೀಡಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...