alex Certify ಟಾಟಾ ಮೋಟರ್ಸ್ ನ ಫ್ಲ್ಯಾಗ್ ಶಿಪ್ ಡಾರ್ಕ್ ಸರಣಿ SUV ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಟಾ ಮೋಟರ್ಸ್ ನ ಫ್ಲ್ಯಾಗ್ ಶಿಪ್ ಡಾರ್ಕ್ ಸರಣಿ SUV ರಿಲೀಸ್

Tata Motors' flagship #DARK series now available in its new SUVs - Tata Motors

 

 

ಬೆಂಗಳೂರು: ಭಾರತದ ಅತಿ ದೊಡ್ಡ ಆಟೋಮೋಬೈಲ್ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ತನ್ನ ಗ್ರಾಹಕರಿಗೆ ಸದಾ ಹೊಚ್ಚ ಹೊಸ ಉತ್ಪನ್ನಗಳನ್ನು ನೀಡುವ ತನ್ನ ಬದ್ಧತೆಯನ್ನು ಹೊಂದಿದೆ. ಇದರ ಮುಂದುವರಿದ ಭಾಗವಾಗಿ ಸಂಸ್ಥೆಯು ಭಾರತದ ನಂಬರ್ ಒನ್ ಮಾರಾಟ ಆಗುತ್ತಿರುವ SUV ಬ್ರ್ಯಾಂಡ್ ನೆಕ್ಸಾನ್ ನ ICE & EV ಯ DARK ಅವತಾರ್ ವಾಹನಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೇ ತನ್ನ ಪ್ರೀಮಿಯಂ EUV ಗಳಾದ ಹೊಸ ಸಫಾರಿ ಮತ್ತು ಹ್ಯಾರಿಯರ್ ನ ಡಾರ್ಕ್ ಆವೃತ್ತಿಯನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ನೆಕ್ಸಾನ್ ಬೆಲೆ 11.45 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಡಾರ್ಕ್ ಶ್ರೇಣಿಯು ಉದ್ಯಮದಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದು, ಇದರ ಬಿಡುಗಡೆಯಾದಾಗಿನಿಂದ ಶ್ರೀಮಂತಿಕೆ ಮತ್ತು ಐಷಾರಾಮಿ ಅನುಭವವನ್ನು ನೀಡುತ್ತಿದೆ.

ಈ ಹೊಸ ವಾಹನ ಬಿಡುಗಡೆ ಮಾಡಿ ಮಾತನಾಡಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ನ ಚೀಫ್ ಕಮರ್ಷಿಯಲ್ ಆಫೀಸರ್ ವಿವೇಕ್ ಶ್ರೀವತ್ಸ ಅವರು, ಡಾರ್ಕ್ ಆವೃತ್ತಿಯು ಹೊಸ ಪೀಳಿಗೆಯ ಕಲ್ಪನೆಗೆ ಪೂರಕವಾಗಿದೆ. ಈ ಪೀಳಿಗೆಯ ಅಭಿರುಚಿ ಮತ್ತು ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ಈ ವಾಹನದ ಆಕರ್ಷಕವಾದ ಹೊರಗಿನ ವಿನ್ಯಾಸ ಮತ್ತು ವೈಶಿಷ್ಟ್ಯಪೂರ್ಣವಾದ ಒಳಗಿನ ವಿನ್ಯಾಸವನ್ನು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. Nexon.ev, Nexon, Harrier ಮತ್ತು Safari ಯನ್ನು ಒಳಗೊಂಡಿರುವ ಈ ಹೊಸ ಡಾರ್ಕ್ ಆವೃತ್ತಿಯು ಮತ್ತಷ್ಟು ವಿಶಿಷ್ಟವಾಗಿ ಬಂದಿದೆ. ನಮ್ಮ ಈ ಹೊಸ ಅಭಿಯಾನವನ್ನು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದೇವೆ. ವಿಶೇಷವಾಗಿ ಗ್ರಾಹಕರಿಗೆ ಉಲ್ಲಾಸ ಮತ್ತು ಸಬಲೀಕರಣದ ಭಾವವನ್ನು ಉಂಟು ಮಾಡುವ ರೀತಿಯಲ್ಲಿ ಈ ಶ್ರೇಣಿಯನ್ನು ಪರಿಕಲ್ಪಿಸಲಾಗಿದೆ. ಈ ಮೂಲಕ ಐಷಾರಾಮಿ ಮತ್ತು ಉನ್ನತ ಕರಕುಶಲತೆಗೆ ಸಮಾನಾರ್ಥಕವಾದ ಹೊಸ ಡಾರ್ಕ್ ಶ್ರೇಣಿಯ ಸರಿಸಾಟಿಯಿಲ್ಲದ ಸಾಮರ್ಥ್ಯಗಳನ್ನು ಅನ್ವೇಷಣೆ ಮಾಡಲು ವಾಹನ ಪ್ರಿಯರನ್ನು ಆಹ್ವಾನಿಸುತ್ತದೆ ಎಂದರು.

ನೆಕ್ಸಾನ್.ಇವಿ: ಭಾರತದ ನಂಬರ್ 1 ಇವಿ, ಇದರ ಬೋಲ್ಡ್ ಡಾರ್ಕ್ ಅವತಾರದಲ್ಲಿ ನೆಕ್ಸಾನ್.ಇವಿ ಆಟೋಮೋಟಿವ್ ಅನುಭವವನ್ನು ಮರುವ್ಯಾಖ್ಯಾನಿಸುವ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಇದರ ಆಕರ್ಷಕ ನೋಟವು ಬೋಲ್ಡ್ ಡಿಜಿಟಲ್ ಭಾಷೆಯ ವಿನ್ಯಾಸದೊಂದಿಗೆ ನಿರೂಪಿಸಲ್ಪಟ್ಟಿದೆ. ಈ ಮೂಲಕ SUVಯ ಆಕರ್ಷಣೆಯನ್ನು ದೃಢಪಡಿಸುತ್ತದೆ. ಇದರ ಹೊರಾಂಗಣ ವಿನ್ಯಾಸವು ಗಟ್ಟಿಮುಟ್ಟಾದ ಬಾಡಿಯೊಂದಿಗೆ ಎಲ್ಲರನ್ನೂ ಆಕರ್ಷಿಸುವುದರ ಜೊತೆಗೆ ಸಿಗ್ನೇಚರ್ #ಡಾರ್ಕ್ ಎಕ್ಸ್ ಟೀರಿಯರ್ ಟ್ರೀಟ್ಮೆಂಟ್ ಅನ್ನು ನೀಡುತ್ತದೆ.

SUV ಯ ಒಳಭಾಗವು ಅತ್ಯಾಧುನಿಕತೆಯನ್ನು ಹೊಂದಿದ್ದು, ಸಂಪೂರ್ಣ ಕಪ್ಪು ಬಣ್ಣದ ಲೆದರ್ ನ ಅತ್ಯುತ್ಕೃಷ್ಟವಾದ ಸೀಟುಗಳನ್ನು ಒಳಗೊಂಡಿದೆ. ಇದನ್ನು ಅಲ್ಟ್ರಾ ಆರಾಮವನ್ನು ನೀಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಎಸ್ಒಎಸ್ ಕಾಲಿಂಗ್ ಫಂಕ್ಷನ್, ಡಿಜಿಟಲ್ ಕಾಕ್ ಪಿಟ್ ನಲ್ಲಿ ಎಂಬೆಡೆಡ್ ಮ್ಯಾಪ್ಸ್ ವೀಕ್ಷಣೆ, ಪ್ರತಿ ಪ್ರಯಾಣವನ್ನು ಶಾಂತಿಯಿಂದ ಅನುಭವಿಸಲು ಪೂರಕವಾದ ಬ್ಲೈಂಡ್ ಸ್ಪಾಟ್ ವ್ಯೂವ್ ಮಾನಿಟರ್ ಗಳಂತಹ ವಿನೂತನವಾದ ಸುರಕ್ಷತೆಯ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ನೆಕ್ಸಾನ್.ಇವಿ ಡಾರ್ಕ್ ತನ್ನ ಗೇಮಿಂಗ್ ಚೇಂಜಿಂಗ್ ವೈಶಿಷ್ಟ್ಯತೆಗಳೊಂದಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದುವ ಮೂಲಕ ಒಂದು ಅನನ್ಯವಾದ ವಾಹನ ಎನಿಸಿದೆ. ವಾಹನದಿಂದ ವಾಹನಕ್ಕೆ ಚಾರ್ಜನಿಖ್ ಮಾಡುವುದು ಮತ್ತು ತಂತ್ರಜ್ಞಾನವನ್ನು ಲೋಡ್ ಮಾಡುವ ಸಾಮರ್ಥ್ಯವನ್ನು ಪುನರ್ ವ್ಯಾಖ್ಯಾನಿಸಲಾಗಿದೆ. Aracade.ev, 15+ ಅಪ್ಲಿಕೇಶನ್ ಗಳೊಂದಿಗೆ ಅಂತರ್ಗತವಾದ ಅಪ್ಲಿಕೇಶನ್ ಸೂಟ್ ಮತ್ತು ಹರ್ಮಾನ್ ನ 31.24 ಸೆಂಟಿಮೀಟರ್ ಸಿನಿಮ್ಯಾಟಿಕ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಹೊಂದಿರುವುದರಿಂದ ನಿಮ್ಮ ಮನರಂಜನಾ ಅಗತ್ಯತೆಗಳನ್ನು ಪೂರೈಸುತ್ತದೆ.

9 ಸ್ಪೀಕರ್ ಗಳನ್ನು ಒಳಗೊಂಡಿರುವ ಜೆಬಿಎಲ್ ಸಿನಿಮ್ಯಾಟಿಕ್ ಧ್ವನಿ ವ್ಯವಸ್ಥೆಯು ಸರಿಸಾಟಿಯಿಲ್ಲದ ಆಡಿಯೋ ಅನುಭವವನ್ನು ನೀಡುತ್ತದೆ. ಇದರ ಕಾರ್ಯಕ್ಷಮತೆಯು ನೆಕ್ಸಾನ್.ಇವಿ ಡಾರ್ಕ್ ತನ್ನ ವಿಭಾಗದಲ್ಲಿ ಅತ್ಯುನ್ನತವಾದ ಶ್ರೇಣಿಯೊಂದಿಗೆ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ. ಪ್ರಭಾವಶಾಲಿಯಾದ ಎಆರ್ ಎಐ ಪ್ರಮಾಣೀಕರಿಸಿದ 465 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಪ್ಯಾಡಲ್ ಶಿಫ್ಟರ್ ಗಳು ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ವರ್ಧಿತ ನಿಯಂತ್ರಣವನ್ನು ನೀಡುತ್ತವೆ. ಡೈನಾಮಿಕ್ ಡ್ರೈವಿಂಗ್ ಅನುಭವವನ್ನು ಖಚಿತಪಡಿಸುತ್ತದೆ. ಇದರಲ್ಲಿನ ಸಾಟಿಯಿಲ್ಲದ ಸ್ಪಷ್ಟತೆಯೊಂದಿಗೆ ಮುಂದಿನ ದಾರಿ/ರಸ್ತೆಯನ್ನು ಸ್ಪಷ್ಟವಾಗಿ ಕಾಣುವಂತೆ ಎಂಡ್ –ಟು-ಎಂಡ್ ಡಿಆರ್ ಎಲ್ & ಟೈಲ್ ಲ್ಯಾಂಪ್ ಗಳೊಂದಿಗೆ ಸ್ಮಾರ್ಟ್ ಡಿಜಿಟಲ್ ಲೈಟ್ ಗಳು ಇರಲಿವೆ. ಬೋಲ್ಡ್ ಡಿಸೈನ್, ಫ್ಯೂಚರಿಸ್ಟಿಕ್ ಟೆಕ್ನಾಲಾಜಿ, ರಾಜಿ ಇಲ್ಲದ ಕಾರ್ಯಕ್ಷಮತೆಯೊಂದಿಗೆ ನೆಕ್ಸಾನ್.ಇವಿ ಡಾರ್ಕ್ ಆಟೋಮೋಟಿವ್ ಲ್ಯಾಂಡ್ ಸ್ಕೇಪ್ ನಲ್ಲಿ ನಿಜವಾದ ಗೇಮ್ ಚೇಂಜರ್ ಆಗಿ ಹೊರಹೊಮ್ಮಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...