alex Certify ಕತ್ರಿನಾ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ ವಿದೇಶಿ ಅಣ್ಣ – ತಂಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ರಿನಾ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ ವಿದೇಶಿ ಅಣ್ಣ – ತಂಗಿ

ಕಿಲಿ ಪೌಲ್​ ಹಾಗೂ ಅವರ ಸಹೋದರಿ ನೀಮಾ ಪೌಲ್​​ ಮತ್ತೊಂದು ವೈರಲ್​ ವಿಡಿಯೋ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರಾತಾನ್​ ಲಂಬಿಯಾ ಹಾಡಿಗೆ ನಟಿಸುವ ಮೂಲಕ ಭಾರತೀಯ ಸಿನಿಪ್ರಿಯರಿಗೆ ಸಖತ್​ ಖುಷಿ ಮಾಡಿದ್ರು. ಸ್ವತಃ ಸಿದ್ದಾರ್ಥ್​ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಈ ಒಡಹುಟ್ಟಿದವರ ನಟನೆಗೆ ಲೈಕ್ ಬಟನ್​ ಒತ್ತಿದ್ದರು.

ಇದಾದ ಬಳಿಕ ಕಿಲಿ ಹಾಗೂ ನೀಮಾ ಅಭಿಮಾನಿಗಳನ್ನು ರಂಜಿಸೋದನ್ನ ಮುಂದುವರಿಸಿದ್ದಾರೆ. ಬಾಲಿವುಡ್​ ಅನೇಕ ಹಾಡುಗಳಿಗೆ ನಟಿಸುವ ಮೂಲಕ ಬಾಲಿವುಡ್​ ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿ ಕಿಲಿ ಪೌಲ್​ ಹಾಗೂ ನೀಮಾ ಪೌಲ್​​ ಬಾಲಿವುಡ್​ನ ಸೂರ್ಯವಂಶಿ ಸಿನಿಮಾದ ಟಿಪ್​ ಟಿಪ್​ ಬರಸಾ ಪಾನಿ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಿಲಿ ಪೌಲ್​ ಥೇಟ್​ ಕತ್ರಿನಾ ಕೈಫ್​​ರಂತೆಯೇ ಹೆಜ್ಜೆ ಹಾಕಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

1994ರಲ್ಲಿ ಮೊಹ್ರಾ ಸಿನಿಮಾದಲ್ಲಿ ಇದೇ ಹಾಡಿಗೆ ಅಕ್ಷಯ್​ ಕುಮಾರ್​ ಹಾಗೂ ರವೀನಾ ಟಂಡನ್​ ನೃತ್ಯ ಮಾಡಿದ್ದರು. ಆಗ ಈ ಹಾಡು ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಬರೋಬ್ಬರಿ 25 ವರ್ಷಗಳ ಬಳಿಕ ಇದೇ ಹಾಡನ್ನು ರೋಹಿತ್​ ಶೆಟ್ಟಿಯ ಸೂರ್ಯವಂಶಿ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈ ಬಾರಿ ಕತ್ರಿನಾ ಕೈಫ್​ ಹಾಗೂ ಅಕ್ಷಯ್​ ಕುಮಾರ್​ ಈ ಹಾಡಿಗೆ ನೃತ್ಯ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...