alex Certify ಸ್ನೇಹಿತರ ಸಾಲ ತೀರಿಸಲಾಗದೇ ಪತ್ನಿಯೊಂದಿಗೆ ಸೆಕ್ಸ್ ಗೆ ಅವಕಾಶ ನೀಡಿದ ಪಾಪಿ ಪತಿ ಸೇರಿ ಮೂವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತರ ಸಾಲ ತೀರಿಸಲಾಗದೇ ಪತ್ನಿಯೊಂದಿಗೆ ಸೆಕ್ಸ್ ಗೆ ಅವಕಾಶ ನೀಡಿದ ಪಾಪಿ ಪತಿ ಸೇರಿ ಮೂವರು ಅರೆಸ್ಟ್

ಚೆನ್ನೈ: ತಮಿಳುನಾಡಿನ ಕಡಲೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಸಾಲ ತೀರಿಸಲು ಸಾಧ್ಯವಾಗದೆ ವ್ಯಕ್ತಿಯೊಬ್ಬ ಸ್ನೇಹಿತರಿಗೆ ತನ್ನ ಪತ್ನಿ ಮೇಲೆ ಅತ್ಯಾಚಾರ ಅವಕಾಶ ಮಾಡಿಕೊಟ್ಟಿದ್ದಾನೆ.

ಸಾಲ ಇತ್ಯರ್ಥಗೊಳಿಸಲು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಕೃತ್ಯವೆಸಗಲು ಪ್ರೋತ್ಸಾಹಿಸಿದ ಮಹಿಳೆಯ ಪತಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಪನೃತಿ ಮಹಿಳಾ ಪೊಲೀಸ್ ಠಾಣೆಯ ಮಾಹಿತಿಯ ಪ್ರಕಾರ, ಎಲ್. ಆರ್. ಪಾಲಯಂನ 35 ವರ್ಷದ ದೈನಂದಿನ ಕೂಲಿ ಕಾರ್ಮಿಕರಾಗಿರುವ ವ್ಯಕ್ತಿ 2018 ರಲ್ಲಿ ಮದುವೆಯಾಗಿದ್ದು, ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಮದ್ಯದ ಚಟಕ್ಕೆ ದಾಸನಾಗಿದ್ದ ಗಂಡನಿಗೆ ಲಾಕ್ ಡೌನ್ ನಂತರದಲ್ಲಿ ಒಂದು ವರ್ಷದಿಂದ ಆದಾಯವಿಲ್ಲದಂತಾಗಿತ್ತು.

ಆತ ತನ್ನ ಸ್ನೇಹಿತರಾದ ವಿ. ಆಂಡಿಕಪ್ಪಂ ಗ್ರಾಮದ ಸುಂದರಮೂರ್ತಿ(25) ಮತ್ತು ಮಣಿಕಂದನ್(26) ಅವರಿಂದ ಅನೇಕ ಸಂದರ್ಭದಲ್ಲಿ ಸಾಲ ಪಡೆದುಕೊಂಡಿದ್ದು, ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ತನ್ನ ಪತ್ನಿಯೊಂದಿಗೆ ದೈಹಿಕ ಸಂಬಂಧ ಬೆಳೆಸಲು ಅವಕಾಶ ಮಾಡಿಕೊಟ್ಟಿದ್ದಾನೆ.

2020 ರ ಡಿಸೆಂಬರ್ ನಲ್ಲಿ ವಿಟಮಿನ್ ಟ್ಯಾಬ್ಲೆಟ್ ಎಂದು ತನ್ನ ಪತ್ನಿಗೆ ಟ್ಯಾಬ್ಲೆಟ್ ಕೊಟ್ಟಿದ್ದ. ಅದನ್ನು ಸೇವಿಸಿದ ಪತ್ನಿ ಪ್ರಜ್ಞೆತಪ್ಪಿದ ಸಂದರ್ಭದಲ್ಲಿ ಸುಂದರಮೂರ್ತಿಯನ್ನು ಮನೆಗೆ ಕರೆಸಿಕೊಂಡು ಪತ್ನಿಯ ಮೇಲೆ ಅತ್ಯಾಚಾರ ಎಸಗಲು ಅವಕಾಶ ಮಾಡಿಕೊಟ್ಟಿದ್ದಾನೆ. ಮಹಿಳೆಗೆ ಪ್ರಜ್ಞೆ ಬಂದ ಸಂದರ್ಭದಲ್ಲಿ ಏನಾಗಿದೆ ಎಂಬುದನ್ನು ತಿಳಿದುಕೊಂಡು ಗಂಡನನ್ನು ಗದರಿಸಿದ್ದಾಳೆ.

ಕೆಲವು ದಿನಗಳ ನಂತರ ಮದ್ಯ ಸೇವಿಸಿದ ಪತಿರಾಯ ಮಣಿಕಂದನ್ ನನ್ನು ಮನೆಗೆ ಕರೆದುಕೊಂಡು ಬಂದು ನಿದ್ದೆ ಮಾಡುತ್ತಿದ್ದ ಪತ್ನಿ ಮೇಲೆ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾನೆ. ಪತ್ನಿಗೆ ಎಚ್ಚರವಾದ ನಂತರ ಕೂಗಾಡಿದ್ದು, ಮಣಿಕಂದನ್ ಓಡಿ ಹೋಗಿದ್ದಾನೆ. ಆಕ್ರೋಶಗೊಂಡ ಮಹಿಳೆ ಸೌದೆಯಿಂದ ಗಂಡನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು

ಘಟನೆ ನಂತರದಲ್ಲಿ ಮಹಿಳೆ ಮಗನನ್ನು ಕರೆದುಕೊಂಡು ತವರು ಮನೆ ಸೇರಿಕೊಂಡಿದ್ದಾಳೆ. ಅಲ್ಲಿಗೆ ಕೂಡ ಆಗಾಗ ಹೋಗುತ್ತಿದ್ದ ಗಂಡ ಸಾಲ ತಿಳಿಸಲು ತನ್ನ ಸ್ನೇಹಿತರಿಗೆ ಸಹಕರಿಸುವಂತೆ ಕೇಳಿಕೊಂಡಿದ್ದಾನೆ. ಗಂಡನ ದುವರ್ತನೆಯಿಂದ ರೋಸಿಹೋದ ಮಹಿಳೆ, ಪತಿ ಮತ್ತು ಆತನ ಸ್ನೇಹಿತರ ವಿರುದ್ಧ ಪನೃತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು ಕಡಲೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...