alex Certify ತಡರಾತ್ರಿ ಬಂದು ಅತ್ಯಾಚಾರವೆಸಗಿ ಅಶ್ಲೀಲ ದೃಶ್ಯ ಸೆರೆ ಹಿಡಿದು ಪರಾರಿಯಾಗುತ್ತಿದ್ದವನಿಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ಬಂದು ಅತ್ಯಾಚಾರವೆಸಗಿ ಅಶ್ಲೀಲ ದೃಶ್ಯ ಸೆರೆ ಹಿಡಿದು ಪರಾರಿಯಾಗುತ್ತಿದ್ದವನಿಗೆ ಬಿಗ್ ಶಾಕ್

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದ ಕುತೂಹಲಕಾರಿ ಘಟನೆಯೊಂದರಲ್ಲಿ ಅತ್ಯಾಚಾರವೆಸಗಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಸಾಕು ನಾಯಿ ಹಿಡಿದಿದೆ.

ಆರೋಪಿ ಸ್ಥಳದಿಂದ ಪರಾರಿಯಾಗಲು ನಾಯಿ ಅಡ್ಡಿಪಡಿಸಿದ್ದು, ಮನೆಯವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿನ್ನಾಭರಣ ಕೆಲಸ ಮಾಡಿಕೊಂಡಿರುವ 29 ವರ್ಷದ ಎಂ. ದಿಲೀಪ್ ಕುಮಾರ್ ಅತ್ಯಾಚಾರ ಎಸಗಿದ ಆರೋಪಿ.

ಶುಕ್ರವಾರ ರಾತ್ರಿ ಸೆಲ್ವಪುರಂ ಮನೆಯೊಂದಕ್ಕೆ ತೆರಳಿದ ದಿಲೀಪ್ ಕುಮಾರ್ 30 ವರ್ಷದ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಲು ಯತ್ನಿಸಿದ್ದಾನೆ. ಮಹಿಳೆಯ ಕುಟುಂಬದವರು ಅದೇ ಕಾಂಪೌಂಡ್ ನಲ್ಲಿ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ಆರೋಪಿ ತನ್ನ ಬೈಕ್ ಅನ್ನು 200 ಮೀಟರ್ ದೂರದಲ್ಲಿ ನಿಲ್ಲಿಸಿ ಬಂದಿದ್ದು ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಲು ಯತ್ನಿಸಿದ ವೇಳೆ ನಾಯಿ ಆತನ ಪ್ಯಾಂಟ್ ಹಿಡಿದಿದ್ದು ಮುಂದೆ ಹೋಗದಂತೆ ತಡೆದಿದೆ.

ನಾಯಿ ಬೊಗಳಿದ್ದಮನ್ನು ಕೇಳಿದ ಮನೆಯವರು ಎದ್ದು ನೋಡಿದಾಗ ಶೆಡ್ ನಲ್ಲಿ ಇದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವುದು ಕಂಡುಬಂದಿದೆ. ದಿಲೀಪ್ ನನ್ನು ನೆರೆಹೊರೆಯವರ ಸಹಕಾರದೊಂದಿಗೆ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಆರೋಪಿ ಮೊಬೈಲ್ ಪರಿಶೀಲಿಸಿದಾಗ ಸಂತ್ರಸ್ತೆಯೊಂದಿಗಿನ ಅಶ್ಲೀಲ ವಿಡಿಯೋ ಮಾಡಿಕೊಂಡಿರುವುದು ಗೊತ್ತಾಗಿದೆ. ಆಕೆ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಈ ಹಿಂದೆ ಹಲವು ಸಲ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ದೃಶ್ಯಗಳನ್ನು ಮೊಬೈಲ್ನಲ್ಲಿ ದಾಖಲಿಸಿಕೊಂಡಿದ್ದ. ಆತನನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ. ಸಾಕು ನಾಯಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...