alex Certify ತಾಲಿಬಾನ್‌ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್…! ರೆಸ್ಟೋರೆಂಟ್‌ ನಲ್ಲಿ ಮಹಿಳೆ – ಪುರುಷರಿಗೆ ಪ್ರತ್ಯೇಕ ವಿಭಾಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಲಿಬಾನ್‌ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್…! ರೆಸ್ಟೋರೆಂಟ್‌ ನಲ್ಲಿ ಮಹಿಳೆ – ಪುರುಷರಿಗೆ ಪ್ರತ್ಯೇಕ ವಿಭಾಗ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ಬಳಿಕ ಅಲ್ಲಿನ ಜನರು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಅಮಾಯಕರ ಜೀವನದ ಜೊತೆ ಚೆಲ್ಲಾಟ ನಡೆಸುತ್ತಿರುವ ಇವರುಗಳು ದಿನಕ್ಕೊಂದು ಹೊಸ ರೂಲ್ಸ್ ಮಾಡಿ ಅಫ್ಘಾನ್ ಜನರು ಬದುಕುವುದೇ ದುಸ್ತರ ಮಾಡಿದ್ದಾರೆ.

ಈಗ ಇದೇ ತಾಲಿಬಾನ್ ಸರ್ಕಾರ, ಮತ್ತೊಂದು ನಿಯಮವನ್ನ ಜಾರಿ ಮಾಡಿದೆ. ಪಶ್ಚಿಮ ಅಫ್ಘಾನಿಸ್ತಾನ್‌ನ ಹೆರಾತ್ ನಗರದಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದು ಹಾಗೂ ಉದ್ಯಾನವನಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ತಾಲಿಬಾನ್ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಫ್ಘಾನ್‌ನಲ್ಲಿ ಸೆಕೆಂಡ್ಸ್ ಇನ್ನಿಂಗ್ಸ್ ಶುರುಮಾಡಿರೋ ತಾಲಿಬಾನ್, ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವ ಕಠಿಣ ನಿರ್ಬಂಧಗಳನ್ನ ಒಂದಾದ ಮೇಲೆ ಒಂದು ಹೇರುತ್ತಲೇ ಇದೆ.

ಮುಂಜಾನೆ ಸೇವಿಸದಿರಿ ಈ ಪದಾರ್ಥ

ಹೆರಾತ್‌ನ ಸದ್ಗುಣ ಪ್ರಚಾರ ಮತ್ತು ದುರಾಚಾರ ತಡೆಗಟ್ಟುವಿಕೆ ಸಚಿವಾಲಯದ, ತಾಲಿಬಾನ್ ಅಧಿಕಾರಿ ರಿಯಾಜುಲ್ಲಾ ಸೀರತ್, ‘ರೆಸ್ಟೋರೆಂಟ್‌ನಲ್ಲಿ ಪುರುಷರು ಮತ್ತು ಮಹಿಳೆಯರನ್ನ ಪ್ರತ್ಯೇಕಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತು ರೆಸ್ಟೋರೆಂಟ್ ಮಾಲೀಕರಿಗೆ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದೆ‘ ಎಂದು ಹೇಳಿದ್ದಾರೆ.

ತನ್ನ ಪತಿಯೊಂದಿಗೆ ರೆಸ್ಟೋರೆಂಟ್ ಒಂದರಲ್ಲಿ ಕುಳಿತುಕೊಂಡಾಗ, ಆ ರೆಸ್ಟೋರೆಂಟ್ ಮಾಲೀಕ ಪ್ರತ್ಯೇಕವಾಗಿ ಕುಳಿತುಕೊಳ್ಳೊದಕ್ಕೆ ಸೂಚಿಸಿದ ಅಂತ. ಮಹಿಳೆಯೊಬ್ಬಳು ಮಾಧ್ಯಮಕ್ಕೆ ಹೇಳಿದ್ದಾಳೆ.

ಇನ್ನೂ ರೆಸ್ಟೋರೆಂಟ್ ಮಾಲೀಕರಿಗೆ ಈ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ತಾಲಿಬಾನ್ ಸರ್ಕಾರ ಇವರ ವಿರುದ್ಧವೇ ಕಠಿಣ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದೆ. ತಾಲಿಬಾನ್ ಸರ್ಕಾರದ ಭಯದಿಂದ ಈಗ ರೆಸ್ಟೋರೆಂಟ್ ಮಾಲೀಕರು ಈ ನಿಯಮವನ್ನ ಪಾಲಿಸದೇ ಬೇರೆ ವಿಧಿಯೇ ಇಲ್ಲದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...