alex Certify BREAKING: ಪಾಕ್‌ ವಿರುದ್ದ ಅಫ್ಘಾನ್‌ ರ ಪ್ರತಿಭಟನೆ – ಗುಂಪು ಚದುರಿಸಲು ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪಾಕ್‌ ವಿರುದ್ದ ಅಫ್ಘಾನ್‌ ರ ಪ್ರತಿಭಟನೆ – ಗುಂಪು ಚದುರಿಸಲು ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು

ನೂರಕ್ಕೂ ಅಧಿಕ ಅಫ್ಘನ್ನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಕಾಬೂಲ್​ನ ಬೀದಿಗಳಲ್ಲಿ ಪಾಕಿಸ್ತಾನ ವಿರೋಧಿ ರ್ಯಾಲಿ ನಡೆಸಿದ್ದು ಐಎಸ್​ಐ ಹಾಗೂ ಇಸ್ಲಾಮಾಬಾದ್​ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ ತಾಲಿಬಾನಿಗಳು ಗುಂಡಿನ ಮಳೆಗೈದಿದ್ದಾರೆ.

ವರದಿಗಳ ಪ್ರಕಾರ , ಕಾಬೂಲ್​​ನಲ್ಲಿ ಪ್ರತಿಭಟನಾಕಾರರ ಗುಂಪು ಚದುರಿಸಲು ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಅಫ್ಘಾನಿಸ್ತಾನದ ಆಂತರಿಕ ವಿಚಾರದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಬೂಲ್​​ನಲ್ಲಿ ಪ್ರತಿಭಟನೆ ರ್ಯಾಲಿ ನಡೆಸಲಾಗಿದೆ ಎನ್ನಲಾಗಿದೆ.

ಕಾಬೂಲ್​​ನಲ್ಲಿ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ಪ್ರತಿಭಟನಾಕಾರರು ಕಳೆದ ವಾರದಿಂದ ಪಾಕಿಸ್ತಾನದ ಐಎಸ್‌ಐ ನಿರ್ದೇಶಕರು ತಂಗಿರುವ ಕಾಬೂಲ್ ಸೆರೆನಾ ಹೋಟೆಲ್ ಕಡೆಗೆ ತೆರಳುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪ್ರತಿಭಟನೆಯ ವಿಡಿಯೋಗಳು ವೈರಲ್​ ಆಗಿವೆ .

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...