alex Certify ಉಪಸಚಿವರ ಪಟ್ಟಿಯಲ್ಲೂ ಮಹಿಳೆಯರಿಗೆ ಸ್ಥಾನ ನೀಡದ ತಾಲಿಬಾನ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಪಸಚಿವರ ಪಟ್ಟಿಯಲ್ಲೂ ಮಹಿಳೆಯರಿಗೆ ಸ್ಥಾನ ನೀಡದ ತಾಲಿಬಾನ್​….!

ತಾಲಿಬಾನ್​ ಇಂದು ಉಪ ಸಚಿವರ ಪಟ್ಟಿಯನ್ನು ಘೋಷಣೆ ಮಾಡಿದೆ. ನಿರೀಕ್ಷೆಯಂತೆ ಈ ಪಟ್ಟಿಯಲ್ಲೂ ಸಹ ಯಾವುದೇ ಮಹಿಳೆಯರಿಗೆ ಸ್ಥಾನ ನೀಡಲಾಗಿಲ್ಲ. ತಾಲಿಬಾನ್​ ವಕ್ತಾರ ಜಬಿಹುಲ್ಲಾ ಮುಜಾಹಿದ್​​ ಹೊಸ ಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಹಜಾರಗಳಂತಹ ಜನಾಂಗೀಯ ಅಲ್ಪಸಂಖ್ಯಾತರಿಗೆ ಸ್ಥಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೂ ಸ್ಥಾನ ನೀಡಬಹುದು ಎಂದು ಹೇಳಿದ್ರು.

ಸೆಪ್ಟೆಂಬರ್​ 7ರಂದು ತಾಲಿಬಾನ್​ ಅಫ್ಘಾನಿಸ್ತಾನದ ಆಡಳಿತ ನಡೆಸಲು ಸಂಪುಟ ರಚನೆ ಮಾಡಿತ್ತು. ಎರಡು ದಶಕಗಳ ಬಳಿಕ ಅಪ್ಘಾನಿಸ್ತಾನದಲ್ಲಿ ಪಾರುಪತ್ಯ ಸಾಧಿಸಿದ್ದ ತಾಲಿಬಾನ್​ ಸರ್ಕಾರಕ್ಕೆ ಎಫ್​ಬಿಐನ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ಮುಲ್ಲಾ ಮೊಹಮ್ಮದ್​ ಹಸನ್​ ಅಖುಂದ್​​ ನೇತೃತ್ವ ವಹಿಸಿದ್ದರು. ಹಕ್ಕಾನಿ ನೆಟ್​ವರ್ಕ್​ನ ಬಹುತೇಕ ನಾಯಕರನ್ನು ಸಂಪುಟದಲ್ಲಿ ಇರಿಸಲಾಗಿದೆ. ಹಕ್ಕಾನಿ ನೆಟ್​ ವರ್ಕ್​ ಸ್ಥಾಪಕರ ಪುತ್ರ ಸಿರಾಜುದ್ದೀನ್​ ಹಕ್ಕಾನಿ ಅಫ್ಘಾನಿಸ್ತಾನದ ಆಂತರಿಕ ಸಚಿವನಾಗಿದ್ದಾನೆ.

ಆತ್ಮಾಹುತಿ ದಾಳಿ ಹಾಗೂ ಅಲ್​ಖೈದಾ ಜೊತೆಗಿನ ಸಂಬಂಧದ ಹಿನ್ನೆಲೆ ಸಿರಾಜುದ್ದೀನ್​ ಕೂಡ ಎಫ್​ಬಿಐ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳಲ್ಲಿ ಒಬ್ಬನಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...