alex Certify ಪ್ರವಾಸದ ವೇಳೆ ʼಹೃದಯ ಸ್ತಂಭನʼ ವಾಗದಂತೆ ತಡೆಯಲು ವಹಿಸಿ ಈ ಮುನ್ನೆಚ್ಚರಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸದ ವೇಳೆ ʼಹೃದಯ ಸ್ತಂಭನʼ ವಾಗದಂತೆ ತಡೆಯಲು ವಹಿಸಿ ಈ ಮುನ್ನೆಚ್ಚರಿಕೆ…!

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ವರದಿಯೊಂದರ ಪ್ರಕಾರ ಜಗತ್ತಿನಾದ್ಯಂತ ಸಂಭವಿಸುವ ಹೃದ್ರೋಗಗಳಲ್ಲಿ ಶೇ.60ರಷ್ಟು ಭಾರತದಲ್ಲಿವೆ. ಹೃದಯವು ಆಮ್ಲಜನಕದ ಕಡಿಮೆ ಒತ್ತಡವನ್ನು ಎದುರಿಸಿದಾಗ, ಹೃದಯ ಸ್ತಂಭನ ಅಥವಾ ಕಾರ್ಡಿಯಾಕ್‌ ಅರೆಸ್ಟ್‌ ಅಪಾಯವು ಹೆಚ್ಚಾಗುತ್ತದೆ. ಎತ್ತರದ ಸ್ಥಳಗಳಿಗೆ ಹೋದಾಗ, ಮೆಟ್ಟಿಲುಗಳನ್ನು ಹತ್ತಿದಾಗ ಮತ್ತು ಅತಿಯಾದ ವ್ಯಾಯಾಮದ ಕಾರಣದಿಂದಾಗಿ ಈ ಸಮಸ್ಯೆ ಸಂಭವಿಸಬಹುದು.

ಗುಡ್ಡಗಾಡು ಪ್ರದೇಶಗಳಿಗೆ ಅಥವಾ ಎತ್ತರದ ಪ್ರದೇಶಗಳಿಗೆ ಹೋಗುವುದು ಹೃದಯದ ಆರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಪರ್ವತಗಳಿಗೆ ಪ್ರವಾಸ ಹೋಗುವ ಮುನ್ನ, ಟ್ರೆಕ್ಕಿಂಗ್‌ ಹೋಗಲು ಪ್ಲಾನ್‌ ಮಾಡುವ ಮೊದಲು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ಕಾರ್ಡಿಯಾಕ್‌ ಅರೆಸ್ಟ್‌ ಅಪಾಯವನ್ನು ತಪ್ಪಿಸಬಹುದು. ಹೃದಯ ತಜ್ಞರ ಪ್ರಕಾರ ಹೆಚ್ಚಿನ ಎತ್ತರದ ಪ್ರದೇಶಗಳಿಗೆ ಹೋದಾಗ ಹೃದಯಕ್ಕೆ ಸಮಸ್ಯೆಗಳಾಗುತ್ತವೆ.

ಎತ್ತರಕ್ಕೆ ಹೋದ ಮೇಲೆ ಆಮ್ಲಜನಕ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಉಸಿರಾಟ ಮತ್ತು ಹೃದಯ ಬಡಿತ ಹೆಚ್ಚಾಗುತ್ತದೆ. ಆಯಾಸವಿದ್ದರೂ ನಡೆದುಕೊಂಡು ಮುಂದಕ್ಕೆ ಹೋಗುತ್ತಲೇ ಇದ್ದರೆ ಅದು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು. ಹೃದಯ ಸ್ತಂಭನವು ಇದ್ದಕ್ಕಿದ್ದಂತೆ ಸಂಭವಿಸಿದರೂ ಅದಕ್ಕೂ ಮೊದಲು ದೇಹವು ಕೆಲವು ಸಂಕೇತಗಳನ್ನು ನೀಡುತ್ತದೆ. ದೇಹದಲ್ಲಿ ದಣಿವು ಇದ್ದಾಗ ಎಚ್ಚರಿಕೆಯಿಂದ ಇರಬೇಕು.

ಎತ್ತರಕ್ಕೆ ಹೋಗುವುದು ಸೈನೊಸಿಸ್‌ನಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಇದರಿಂದ ತುಟಿಗಳು, ಉಗುರುಗಳು ಮತ್ತು ಚರ್ಮ ನೀಲಿ ಬಣ್ಣಕ್ಕೆ ತಿರುಗಬಹುದು. ಇವು ರಕ್ತದಲ್ಲಿ ಆಮ್ಲಜನಕದ ಕೊರತೆಯ ಲಕ್ಷಣಗಳಾಗಿವೆ. ನರಗಳ ತೊಂದರೆ, ಉಸಿರಾಟದ ತೊಂದರೆ, ಆಯಾಸ ಹೃದಯ ಸ್ತಂಭನದ ಎಚ್ಚರಿಕೆಯಾಗಿರಬಹುದು. ಅವುಗಳನ್ನು ಲಘುವಾಗಿ ಪರಿಗಣಿಸಬಾರದು ಅಥವಾ ನಿರ್ಲಕ್ಷಿಸಬಾರದು. ಎತ್ತರಕ್ಕೆ ಹೋಗುವುದರಿಂದ ಕೆಲವರಿಗೆ ವರ್ಟಿಗೋ ಸಮಸ್ಯೆಯೂ ಇರುತ್ತದೆ. ಈ ಸಂದರ್ಭದಲ್ಲಿ, ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಕೆಲವು ಸಂದರ್ಭಗಳಲ್ಲಿ, ತೀವ್ರವಾದ ಶ್ವಾಸಕೋಶದ ಎಡಿಮಾ ಸಂಭವಿಸಬಹುದು. ಶ್ವಾಸಕೋಶದಲ್ಲಿ ನೀರು ತುಂಬುತ್ತದೆ. ಇದರಿಂದ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ.

ಹೃದಯ ಸ್ತಂಭನವಾದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

ಎತ್ತರದ ಪ್ರದೇಶಗಳನ್ನು ಏರುವಾಗ ನಿಮ್ಮನ್ನು ಆ ವಾತಾವರಣಕ್ಕೆ ಒಗ್ಗಿಸಿಕೊಳ್ಳಬೇಕು. ಕನಿಷ್ಠ 12 ಗಂಟೆಗಳ ಕಾಲ ಅಲ್ಲಿ ಸಮಯ ಕಳೆಯಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ತೀವ್ರವಾದ ಶ್ವಾಸಕೋಶದ ಎಡಿಮಾದ ಲಕ್ಷಣಗಳು ಎರಡರಿಂದ ನಾಲ್ಕು ದಿನಗಳ ಹಿಂದೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ಸಂದರ್ಭದಲ್ಲಿ, ವೈದ್ಯರನ್ನು ಸಂಪರ್ಕಿಸಿ. ಔಷಧಿಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.

ಪ್ರಯಾಣಕ್ಕೆ ಹೋದಾಗಲೆಲ್ಲಾ ನಿರಂತರವಾಗಿ ನೀರು ಕುಡಿಯುತ್ತಿರಿ. ಈ ಕಾರಣದಿಂದಾಗಿ, ದೇಹವು ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತದೆ. ಎತ್ತರಕ್ಕೆ ಹೋಗುವಾಗ, ಮೆಟ್ಟಿಲು ಹತ್ತುವಾಗ, ಓಡುವಾಗ ಸುಸ್ತು ಎನಿಸಿದರೆ ತಕ್ಷಣ ನಿಂತು ದೇಹಕ್ಕೆ ವಿಶ್ರಾಂತಿ ನೀಡಿ. ಬಲವಂತವಾಗಿ ನಡೆಯುವುದನ್ನು ತಪ್ಪಿಸಿ. ಆಸ್ಪಿರಿನ್‌ನಂತಹ ರಕ್ತ ತೆಳುಗೊಳಿಸುವ ಔಷಧಿಗಳು ಪ್ರಯಾಣದ ಸಮಯದಲ್ಲಿ ಸಹಾಯಕವಾಗಬಹುದು. ಇದನ್ನು ತೆಗೆದುಕೊಂಡರೆ ರಕ್ತ ಹೆಪ್ಪುಗಟ್ಟುವುದಿಲ್ಲ ಮತ್ತು ದೇಹದ ಎಲ್ಲಾ ಭಾಗಗಳು ಆಮ್ಲಜನಕವನ್ನು ಪಡೆಯುತ್ತವೆ.

ಲೇಹ್-ಲಡಾಖ್‌ನಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಆಮ್ಲಜನಕದ ಪೋರ್ಟಬಲ್ ಸಿಲಿಂಡರ್ ಅನ್ನು ಇರಿಸಿಕೊಳ್ಳುವುದು ಉತ್ತಮ. ಶೀತ ಪ್ರದೇಶಗಳಲ್ಲಿ, ಜನರು ಸಾಮಾನ್ಯವಾಗಿ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ ಮಲಗುತ್ತಾರೆ. ಇದು ಹೃದಯಕ್ಕೆ ಅಪಾಯಕಾರಿಯಾಗಬಹುದು. ಅದಕ್ಕಾಗಿಯೇ ಕಿಟಕಿ ತೆರೆದು ಮಲಗಬೇಕು. ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ನಿರ್ಲಕ್ಷಿಸಬೇಡಿ. ತಲೆತಿರುಗುವಿಕೆ, ಹೆದರಿಕೆ, ತುಟಿಗಳು ಅಥವಾ ಉಗುರುಗಳ ನೀಲಿ ಬಣ್ಣ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳಿದ್ದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...